ADVERTISEMENT

ಸೋಮಾಲಿಯಾ ಕಡಲಲ್ಲಿ ಹಡಗು ಮುಳುಗಿ 55 ನಿರಾಶ್ರಿತರು ನಾಪತ್ತೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ನೈರೋಬಿ(ಎಪಿ): ಸೋಮಾಲಿಯಾ ಕಡಲಿನಲ್ಲಿ ಹಡಗೊಂದು ಮುಳುಗಿದ ಪರಿಣಾಮವಾಗಿ ಅದರಲ್ಲಿದ್ದ 55 ನಿರಾಶ್ರಿತರು ಕಾಣೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತ ಏಜೆನ್ಸಿ ತಿಳಿಸಿದೆ.

2011ರ ನಂತರ ಸಂಭವಿಸಿದ 2ನೇ ದೊಡ್ಡ ದುರಂತ ಇದಾಗಿದೆ. ಯೆಮೆನ್ ದೇಶದತ್ತ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ಹಡಗು ಇದಾಗಿದ್ದು, ಸ್ವಲ್ಪ ದೂರ ಕ್ರಮಿಸಿದ ನಂತರ ಮಗುಚಿದೆ. ಹೆಚ್ಚಿನ ಜನರು ಹಡಗಿನಲ್ಲಿದ್ದುದೇ ಮುಳುಗಲು ಕಾರಣ ಎನ್ನಲಾಗಿದೆ.

ದುರಂತದಲ್ಲಿ ಐವರು ಬದುಕುಳಿದಿದ್ದು, 23 ದೇಹಗಳನ್ನು ಹೊರ ತೆಗೆಯಲಾಗಿದೆ. 55 ಮಂದಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.