ADVERTISEMENT

ಸೌದಿ ತಲುಪಿದ ಹಜ್ ಯಾತ್ರಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ದುಬೈ, (ಪಿಟಿಐ): ಭಾರತದಿಂದ ಪ್ರಸಕ್ತ ಸಾಲಿನಲ್ಲಿ ಹಜ್ ಯಾತ್ರೆ ಕೈಗೊಂಡಿರುವ ಒಂದು ಲಕ್ಷ ಯಾತ್ರಾರ್ಥಿಗಳು ಸೌದಿ ಅರೇಬಿಯಾ ತಲುಪಿದ್ದಾರೆ ಎಂದು ಇಲ್ಲಿರುವ ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ 97,405 ಯಾತ್ರಾರ್ಥಿಗಳು ಮೆಕ್ಕಾದಲ್ಲಿದ್ದು, 3,628 ಯಾತ್ರಾರ್ಥಿಗಳು ಮದೀನಾದಲ್ಲಿದ್ದಾರೆ ಎಂದು ಸೌದಿಯ ಜೆಡ್ಡಾದಲ್ಲಿರುವ ಭಾರತದ ರಾಯಭಾರಿ ಹೇಳಿದ್ದಾರೆ.

ಭಾರತದ ಹಜ್ ಸಮಿತಿಯಿಂದ ಬಂದ 39 ಹಾಗೂ ಖಾಸಗಿ ಪ್ರವಾಸ ಆಯೋಜಕರಿಂದ ಬಂದ ಏಳು ಯಾತ್ರಾರ್ಥಿಗಳು ಸೇರಿದಂತೆ ಬುಧವಾರದ ವರೆಗೆ 46  ಯಾತ್ರಾರ್ಥಿಗಳು ಮೃತರಾಗಿದ್ದಾರೆ ಎಂದು ರಾಯಭಾರ ಕಚೇರಿ ಹೇಳಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.