ADVERTISEMENT

ಸ್ನೊಡೆನ್ ಬಳಿ ದಾಖಲೆ : ಗ್ರೀನ್‌ವಾಲ್ಡ್

ರಾಷ್ಟ್ರೀಯ ಭದ್ರತಾ ಸಂಸ್ಥೆ ಕಾರ್ಯವೈಖರಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST
ಸ್ನೊಡೆನ್ ಬಳಿ ದಾಖಲೆ : ಗ್ರೀನ್‌ವಾಲ್ಡ್
ಸ್ನೊಡೆನ್ ಬಳಿ ದಾಖಲೆ : ಗ್ರೀನ್‌ವಾಲ್ಡ್   

ರಿಯೊ ಡಿ ಜನೈರೊ (ಎಪಿ): `ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಎಸ್‌ಎ) ಕಾರ್ಯವೈಖರಿಯನ್ನು ಒಳಗೊಂಡ ಸೂಕ್ಷ್ಮ ನೀಲನಕ್ಷೆ ಸೇರಿ ಸಾವಿರಾರು ಮಹತ್ವದ ದಾಖಲೆಗಳು ಬೇಹುಗಾರಿಕೆ ಇಲಾಖೆಯ ಮಾಜಿ ಗುತ್ತಿಗೆದಾರ, ತಂತ್ರಜ್ಞ ಎಡ್ವರ್ಡ್ ಸ್ನೊಡೆನ್ ಬಳಿ ಇವೆ' ಎಂದು ಅಂಕಣಕಾರ ಗ್ಲೆನ್ ಗ್ರೀನ್‌ವಾಲ್ಡ್ ತಿಳಿಸಿದ್ದಾರೆ.

`ಸ್ನೊಡೆನ್ ಬಳಿ ಇರುವ ದಾಖಲೆಗಳಿಂದ ಅವರು ಹೇಳುತ್ತಿರುವುದು ನಿಜ ಎನ್ನುವುದನ್ನು ಸಾಬೀತು ಮಾಡಬಹುದು' ಎಂದು ಈ ಪ್ರಕರಣದ ಕುರಿತು ಮೊದಲ ಬಾರಿಗೆ ವರದಿ ಪ್ರಕಟಿಸಿದ `ಗಾರ್ಡಿಯನ್' ಪತ್ರಿಕೆಯ ಅಂಕಣಕಾರ ಗ್ರೀನ್‌ವಾಲ್ಡ್ ಹೇಳಿದ್ದಾರೆ.

ಹಲವು ವಾರಗಳಿಂದ ಮಾಸ್ಕೊ ವಿಮಾನ ನಿಲ್ದಾಣದಲ್ಲಿ ಇರುವ ಸ್ನೊಡೆನ್, ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಲ್ಯಾಟಿನ್ ಅಮೆರಿಕಕ್ಕೆ ತೆರಳುವವರೆಗೆ ರಷ್ಯಾದಲ್ಲಿ ಆಶ್ರಯ ನೀಡಿದರೆ ಅಮೆರಿಕಕ್ಕೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಬಹಿರಂಗಪಡಿಸುವುದಿಲ್ಲ ಎಂದೂ ಹೇಳಿದ್ದರು.

`ತಮ್ಮ ಬಳಿ ಇರುವ ದಾಖಲೆಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಸ್ನೊಡೆನ್ ತಿಳಿಸಿದ್ದಾರೆ. ಈ ಮಹತ್ವದ ದಾಖಲೆಗಳನ್ನು ಯಾರಾದರೂ ಓದಿದಲ್ಲಿ ಎನ್‌ಎಸ್‌ಎ ಕಾರ್ಯವೈಖರಿಯನ್ನು ತಿಳಿದುಕೊಳ್ಳಬಹುದು' ಎಂದು ಸ್ನೊಡೆನ್ ಜೊತೆ ಮಾತುಕತೆ ನಡೆಸಿದ ನಾಲ್ಕು ಗಂಟೆಗಳ ಬಳಿಕ ಗ್ರೀನ್‌ವಾಲ್ಡ್ ತಿಳಿಸಿದ್ದಾರೆ.

`ಒಂದುವೇಳೆ ದಾಖಲೆಗಳನ್ನು ಜಗ ಜ್ಜಾಹೀರು ಮಾಡಿದರೆ ಅಮೆರಿಕ ಅಥವಾ ಅದರ ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟಾಗಬಹುದು. ಅಲ್ಲದೇ ಅವರ ಉದ್ದೇಶ ಕೂಡ ಬಹಿರಂಗ ಗೊಳ್ಳುತ್ತದೆ' ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.