ADVERTISEMENT

ಸ್ನೊಡೆನ್ ಹಸ್ತಾಂತರ ಇಲ್ಲ: ಪುಟಿನ್

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಮಾಸ್ಕೊ (ಐಎಎನ್‌ಎಸ್): ಅಮೆರಿಕ ಬೇಹುಗಾರಿಕಾ ಸಂಸ್ಥೆಗಳ ರಹಸ್ಯ ಮಾಹಿತಿಯನ್ನು ಬಯಲು ಮಾಡಿರುವ ಎಡ್ವೆರ್ಡ್ ಸ್ನೊಡೆನ್ ಅವರನ್ನು ಅಮೆರಿಕಕ್ಕೆ ಹಸ್ತಾಂತರ ಮಾಡುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

`ನಾವು ಯಾವುದೇ ರೀತಿಯಲ್ಲಿ ಸ್ನೊಡೆನ್ ಅವರ ಸಮರ್ಥನೆಗೆ ನಿಂತಿಲ್ಲ. ರಷ್ಯಾ ಮತ್ತು ಅಮೆರಿಕ ಮಧ್ಯೆ ಅಪರಾಧಿ ಅಥವಾ ಆರೋಪ ಹೊತ್ತ ವ್ಯಕ್ತಿಗಳನ್ನು ಹಸ್ತಾಂತರ ಮಾಡುವಂತಹ ಯಾವುದೇ ಪರಸ್ಪರ ಒಪ್ಪಂದ ಆಗಿಲ್ಲ. ಆದ ಕಾರಣ ಅವರನ್ನು ಅಮೆರಿಕಕ್ಕೆ ಕಳುಹಿಸಲಾಗದು' ಎಂದು ಅವರು ಟಿ.ವಿ ವಾಹಿನಿಯೊಂದಕ್ಕೆ ಬುಧವಾರ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.