ADVERTISEMENT

ಸ್ಯಾಂಡಿ ಮುನಿಸಿಗೆ 70 ಬಲಿ, ಅಂಧಕಾರದಲ್ಲಿ 3.75 ದಶಲಕ್ಷ ಅಮೆರಿಕನ್‌ರು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2012, 10:15 IST
Last Updated 1 ನವೆಂಬರ್ 2012, 10:15 IST
ಸ್ಯಾಂಡಿ ಮುನಿಸಿಗೆ 70 ಬಲಿ, ಅಂಧಕಾರದಲ್ಲಿ 3.75 ದಶಲಕ್ಷ ಅಮೆರಿಕನ್‌ರು
ಸ್ಯಾಂಡಿ ಮುನಿಸಿಗೆ 70 ಬಲಿ, ಅಂಧಕಾರದಲ್ಲಿ 3.75 ದಶಲಕ್ಷ ಅಮೆರಿಕನ್‌ರು   

ವಾಷಿಂಗ್ಟನ್ (ಐಎಎನ್‌ಎಸ್): ಅಮೆರಿಕದ ಪೂರ್ವ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸಿರುವ `ಸ್ಯಾಂಡಿ ಚಂಡಮಾರುತ~ದ ಅಬ್ಬರಕ್ಕೆ ಇವರೆಗೆ ಸುಮಾರು 70 ಜನರು ಬಲಿಯಾಗಿದ್ದು, ಇದರ ಪ್ರಭಾವ ನ್ಯೂಯಾರ್ಕ್ ಹಾಗೂ ನ್ಯೂಜರ್ಸಿ ನಗರ ಪ್ರದೇಶಗಳಲ್ಲಿ  ಸ್ವಲ್ಪ ಮಟ್ಟಿಗೆ ತಗ್ಗಿದೆಯಾದರೂ ಇನ್ನೂ 3.75 ದಶಲಕ್ಷ ಜನರು ಕತ್ತಲೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

ಸ್ಯಾಂಡಿ ರೌದ್ರಾವತಾರಕ್ಕೆ ನ್ಯೂಯಾರ್ಕ್ ನಗರದಲ್ಲಿ 24, ನ್ಯೂಜರ್ಸಿಯಲ್ಲಿ 8 ಹಾಗೂ ಕನೆಕ್ಟಿಕಟ್‌ನಲ್ಲಿ 4 ಸೇರಿದಂತೆ ಅಮೆರಿಕದಾದ್ಯಂತ 70 ಜನರು ಬಲಿಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಕಾರ್ಯಕರ್ತರು  ಹಾನಿಗೊಂಡಿರುವ ಮನೆಗಳಿಂದ ಮೃತ ದೇಹಗಳನ್ನು ಹೊರ ತೆಗೆಯುವ ಕಾರ್ಯ ನಡೆಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ ವರದಿ ಮಾಡಿದೆ.

~ಸ್ಯಾಂಡಿಯಿಂದಾಗಿ ಸುಮಾರು 6 ಶತಕೋಟಿ ಆರ್ಥಿಕ ನಷ್ಟ ಉಂಟಾಗಿದೆ~ ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ ಎಂದು ನ್ಯೂಯಾರ್ಕ್ ಗರ್ವನರ್ ಆಂಡ್ರ್ಯೂ ಎಮ್. ಕ್ಯೂಮೊ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.