ADVERTISEMENT

ಹಖಾನಿ ವಿರುದ್ಧ ಕ್ರಮಕ್ಕೆ ಸಾಮರ್ಥ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ವಾಷಿಂಗ್ಟನ್(ಪಿಟಿಐ): ಹಖಾನಿ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತನಗೆ ಸಾಮರ್ಥ್ಯ ಇಲ್ಲ ಎಂದು ಪಾಕಿಸ್ತಾನ ತಿಳಿಸಿರುವುದಾಗಿ ಆಫ್ಘಾನಿಸ್ತಾನದಲ್ಲಿರುವ ಅಮೆರಿಕದ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

ಉಗ್ರರ ಜಾಲದ ವಿರುದ್ಧ, ಸರಿಯಾದ ವೇಳೆಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳವ ಸಾಮರ್ಥ್ಯ ಪಾಕಿಸ್ತಾನಕ್ಕೆ ಇಲ್ಲ ಎಂದು ಅಲ್ಲಿನವರೇ ಹೇಳಿದ್ದಾಗಿ ಅಂತರ ರಾಷ್ಟೀಯ ಭದ್ರತಾ ನೆರವು ಪಡೆಯ ಜಂಟಿ ಮುಖ್ಯಸ್ಥ ಹಾಗೂ ಅಮೆರಿಕ ಪಡೆಯ ಉಪ ಮುಖ್ಯಸ್ಥ ಕರ್ಟಿಸ್ ಸ್ಕಾಪರೊಟಿ ಮಾಹಿತಿ ನೀಡಿದ್ದಾರೆ.

`ಆಫ್ಘಾನಿಸ್ತಾನದಲ್ಲಿ ನಾವು ಯಶಸ್ಸು ಸಾಧಿಸಿದ್ದು, ಕಾರ್ಯಾಚರಣೆ ಉತ್ತಮ ಪರಿಣಾಮ ಬೀರಿದೆ. ಹಖಾನಿ ಉಗ್ರ ಜಾಲ ಆಫ್ಘಾನಿಸ್ತಾನದಲ್ಲಿ ಚಿಕ್ಕದಾಗಿದ್ದರೂ, ದೇಶಕ್ಕೆ ಹೆಚ್ಚಿನ ಬೆದರಿಕೆ ಇದೆ. ಅಲ್ಲದೇ ಈ ಸಂಘಟನೆ ಇತರ ಉಗ್ರ ಸಂಘಟನೆಗಳೊಂದಿಗೂ ಸಂಪರ್ಕ ಹೊಂದಿದೆ~ ಎಂದು  ಕರ್ಟಿಸ್ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.