ADVERTISEMENT

ಹಡಗು ದುರಂತದಲ್ಲಿ ಭಾರತೀಯನೊಬ್ಬ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 12:05 IST
Last Updated 16 ಜನವರಿ 2012, 12:05 IST

ಬೆಂಗಳೂರು/ಗಿಗ್ಲಿಯೊ (ಪಿಟಿಐ/ಎಎಫ್‌ಪಿ/ಐಎಎನ್‌ಎಸ್);  ಇಟಲಿಯ ಗಿಗ್ಲಿಯೊ ದ್ವೀಪದ ಬಳಿ ಮೆಡಿಟರೇನಿಯನ್ ಸಮುದ್ರದಲ್ಲಿ `ಕೊಸ್ಟಾ ಕಾನ್‌ಕಾರ್ಡಿಯಾ~ ಪ್ರಯಾಣಿಕರ ಹಡಗು ದುರಂತದಲ್ಲಿ ಒಬ್ಬ ಭಾರತೀಯ ಪ್ರಜೆ ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣಾ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ರೀಬೆಲ್ಲೋ ರಸೆಲ್ ಟಿಯರೆನ್ಸ್ ಎಂಬ ಭಾರತೀಯ ಹಡಗು ಸಿಬ್ಬಂದಿ ಬಗೆಗೆ ಯಾವುದೇ ಸುಳಿವು ದೊರೆತಿಲ್ಲ. ಇವರ ಸಹೋದರ ಈಗಾಗಲೇ ಇಟಲಿಯನ್ನು ತಲುಪಿದ್ದಾರೆ. ದುರಂತಗೊಂಡ ಹಡಗಿನಲ್ಲಿ ಇವರಿಗಾಗಿ ಶೋಧ ಕಾರ್ಯ ಭರದಿಂದ ಸಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಈಗಾಗಲೇ ಹಡಗಿನ 201 ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಆದರೆ ಒಬ್ಬರು ಭಾರತೀಯ ಸಿಬ್ಬಂದಿ ಬಗೆಗೆ ಇನ್ನೂ ಯಾವುದೇ ಸುಳಿವು ದೊರೆತಿಲ್ಲ ಎಂದು ಪರಿಹಾರ ಕಾರ್ಯಾಚರಣೆ ತಂಡವು ತಿಳಿಸಿದೆ.

ಈ ಐಷಾರಾಮಿ ಹಡಗಿನ ಮಾಲೀಕರು ದುರಂತದಲ್ಲಿ 6 ಮಂದಿ ಮೃತಪಟ್ಟಿರುವುದು ಖಚಿತಗೊಂಡಿದ್ದು, ಕಾಣೆಯಾದವರ ಹುಡುಕಾಟ ನಡೆದಿದೆ ಎಂದು ತಿಳಿಸಿದ್ದಾರೆ. ದುರಂತದಿಂದ ಸುಮಾರು 85-95 ದಶಲಕ್ಷ ಅಮೆರಿಕನ್ ಡಾಲರ್ ನಷ್ಟವಾಗಿರಬಹುದೆಂದು ಅಂದಾಜು ಮಾಡಲಾಗಿದೆ. ಸಾವಿರಾರು ಮಂದಿಯನ್ನು ಹೆಲಿಕಾಪ್ಟರ್ ಮುಖಾಂತರ ರಕ್ಷಿಸಲಾಗಿದ್ದು, ಇನ್ನೂ 15 ಮಂದಿಯ ಸುಳಿವು ದೊರೆತಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT