ಲಂಡನ್ (ಪಿಟಿಐ): ಹವಾಮಾನ ಕುರಿತಂತೆ ಜಾಗತಿಕವಾಗಿ ಇದುವರಗೆ ನಡೆದ ಚರ್ಚೆಗಳಲ್ಲಿ ಲಿಂಗ-ತಾರತಮ್ಯ ನಡೆದಿದೆ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಜಾಗತಿಕ ತಾಪಮಾನ ಏರಿಕೆ ಕುರಿತಂತೆ ಮಹಿಳೆಯರು ಎತ್ತುತ್ತಿರುವ ಧ್ವನಿಗೆ ಪ್ರಾಮುಖ್ಯತೆ ಸಿಗದೇ ಇರುವುದರ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಲಂಡನ್‌ನ ರಾಯಲ್ ಕಾಮನ್‌ವೆಲ್ತ್ ಸೊಸೈಟಿಯಲ್ಲಿ ಗುರುವಾರ ರಾತ್ರಿ ನಡೆದ ಕಾಮನ್‌ವೆಲ್ತ್ ಉಪನ್ಯಾಸ-2011ಕಾರ್ಯಕ್ರಮದಲ್ಲಿ ‘ಬದಲಾವಣೆಯ ಪ್ರತಿನಿಧಿಗಳಾಗಿ ಮಹಿಳೆಯರು’ ಎಂಬ ವಿಷಯದ ಕುರಿತು ಮಾತನಾಡಿದ ಸೋನಿಯಾ ಗಾಂಧಿ, ‘ಹವಾಮಾನ ವಿಷಯಕ್ಕೆ ಸಂಬಂಧಿಸಿದ ನ್ಯಾಯ ವಿಶ್ವದ ವಿವಿಧ ರಾಷ್ಟ್ರಗಳ ನಡುವೆ ಮಾತ್ರವಲ್ಲ, ಲಿಂಗ ತಾರತಮ್ಯ ರಹಿತವಾಗಿಯೂ ಅದು ಇರಬೇಕು ಎಂದು ಬಯಸುತ್ತೇವೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.