ADVERTISEMENT

ಹವಾಯಿಯಲ್ಲಿ ಜ್ವಾಲಾಮುಖಿ

ಏಜೆನ್ಸೀಸ್
Published 7 ಮೇ 2018, 19:30 IST
Last Updated 7 ಮೇ 2018, 19:30 IST
ಜ್ವಾಲಾಮುಖಿಯಿಂದ ಎದ್ದಿರುವ ಹೊಗೆ –ಎಎಫ್‌ಪಿ ಚಿತ್ರ
ಜ್ವಾಲಾಮುಖಿಯಿಂದ ಎದ್ದಿರುವ ಹೊಗೆ –ಎಎಫ್‌ಪಿ ಚಿತ್ರ   

ಪಹೋವಾ, ಅಮೆರಿಕ: ಹವಾಯಿ ದ್ವೀಪದಲ್ಲಿ ಕಿಲೂಯೆ ಜ್ವಾಲಾಮುಖಿಯ ಪರಿಣಾಮ 31ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿದ್ದು, ಲಾವಾರಸ 200 ಅಡಿ ಎತ್ತರಕ್ಕೆ ಚಿಮ್ಮುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ 1,700ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

‘ಲೈಲಾನಿ ಎಸ್ಟೇಟ್‌ ಪ್ರದೇಶದಲ್ಲಿ ಮನೆಗಳು ಹಾನಿಗೀಡಾಗಿದ್ದು, ಜ್ವಾಲಾಮುಖಿ ಪರಿಣಾಮ ಬಂಡೆಗಳು ಕರಗಿವೆ. ಭೂಮಿ ಬಿರುಕು ಬಿಟ್ಟ ಸ್ಥಳಗಳಲ್ಲಿ ವಿಷಾನಿಲಗಳು ಹೊರಹೊಮ್ಮುತ್ತಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.