ADVERTISEMENT

ಹಿಟ್ಲರ್ ಬಳಸಿದ್ದ ಕಾರು ಪತ್ತೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 19:30 IST
Last Updated 10 ಜುಲೈ 2012, 19:30 IST

ಲಂಡನ್ (ಪಿಟಿಐ): ನ್ಯೂಜೆರ್ಸಿಯ ವಾಹನ ಡೀಲರ್ ಒಬ್ಬರು ತಮ್ಮ ಬಳಿ ಇದ್ದ ಹಳೆಯ ಮರ್ಸಿಡಿಸ್ ಕಾರೊಂದಕ್ಕೆ ಬಿಡಿ ಭಾಗಗಳನ್ನು ಖರೀದಿಸಲು ಆನ್ ಲೈನ್ ಮಳಿಗೆಯೊಂದರಲ್ಲಿ ತಡಕಾಡುತ್ತಿದ್ದಾಗ ಅವರಿಗೆ ಅಚ್ಚರಿಯೊಂದು ಕಾದಿತ್ತು.

ತಮ್ಮ ಬಳಿ ಇರುವ ಕಾರು 1942ರಲ್ಲಿ ಹಿಟ್ಲರ್ ಅವರಿಗಾಗಿ  ತಯಾರಿಸಿದ್ದು ಎಂದು ತಿಳಿದಾಗ ಅವರಿಗೆೆ ಅಚ್ಚರಿ!

ವಾಹನಗಳ ಡೀಲರ್ ಆಗಿರುವ ಜೆನಪ್ ಟ್ಯುನ್ಸರ್ ಅವರು ಮರ್ಸಿಡಿಸ್ ಮಳಿಗೆಗೆ  ಕರೆ ಮಾಡಿ ತಮ್ಮ ಕಾರಿನ ದುರಸ್ತಿಗೆ ಬಿಡಿ ಭಾಗಗಳಿಗೆ ಬೇಡಿಕೆ ಇಟ್ಟರು.  ಕಾರಿನ ಸೀರಿಯಲ್ ಸಂಖ್ಯೆಯನ್ನು ಕಂಪೆನಿಗೆ ತಿಳಿಸಿದಾಗ ಅಲ್ಲಿಂದ ಬಂದ ಪ್ರತಿಕ್ರಿಯೆ, `ಅದು ಹಿಟ್ಲರ್ ಅವರಿಗೆ ಸೇರಿದ ಕಾರು~ ಎಂದು.  

ಆ ಕಾರು ಹಿಟ್ಲರ್‌ಗೆ ಸೇರಿದ್ದು ಎಂಬುದನ್ನು ಮರ್ಸಿಡಿಸ್ ದೃಢಪಡಿಸಿದೆ. ನಾಝಿ ಅಧಿಕಾರಿಗಳಿಗಾಗಿ ತಯಾರಿಸಿದ್ದ ಎಂಟು ಕಾರುಗಳಲ್ಲಿ ಇದೂ ಒಂದು ಎಂದು ಕಂಪೆನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.