ವ್ಯಾಟಿಕನ್ ಸಿಟಿ (ಎಎಫ್‌ಪಿ): ಯುರೋಪ್‌ಗೆ ವಲಸೆ ಬರುತ್ತಿರುವ ನಿರಾಶ್ರಿತರಿಗೆ ಆಶ್ರಯ ನೀಡಲು ನಿರಾಕರಿಸುತ್ತಿರುವವರು ‘ದೇವರಲ್ಲಿ ಕ್ಷಮೆ ಯಾಚಿಸಬೇಕು’ ಎಂದು ಪೋಪ್ ಫ್ರಾನ್ಸಿಸ್ ಅವರು ಬುಧವಾರ ಹೇಳಿದ್ದಾರೆ.
ಮೆಡಿಟೇರಿಯನ್ ಸಮುದ್ರದ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿರುವ ವಲಸಿಗರನ್ನು ತಡೆಯುವ ಅಥವಾ ಅವರಿಗೆ ಆಶ್ರಯ ಕಲ್ಪಿಸುವ ಬಗ್ಗೆ ಒಪ್ಪಿಕೊಳ್ಳದ ಯುರೋಪ್‌ನ ಆಂತರಿಕ ಸಚಿವರ ನಡೆ ನಂತರ ಪೋಪ್ ಈ ಮಾತು ಹೇಳಿದ್ದಾರೆ. ‘ತಮ್ಮ ಜನ್ಮಸ್ಥಳದಿಂದ ಆಶ್ರಯ ಕೋರಿ ವಲಸೆ ಬರುತ್ತಿರುವ ನಮ್ಮ ಸೋದರ, ಸೋದರಿಯರಿಗೆ ಗೌರವ ನೀಡಬೇಕೆಂದು’ ಪೋಪ್ ಫ್ರಾನ್ಸಿಸ್ ಒತ್ತಾಯಿಸಿದರು.
‘ನಿರಾಶ್ರಿತರಿಗೆ ನೆರವು ನೀಡಲು ಮುಂದೆ ಬರುವವರಿಗೆ ನಾನು ಪ್ರೋತ್ಸಾಹಿಸುತ್ತೇನೆ ಮತ್ತು ಈ ವಿಷಯದಲ್ಲಿ ಅಂತರರಾಷ್ಟ್ರೀಯ ಸಮುದಾಯಗಳು ಒಗ್ಗೂಡಲಿವೆ ಹಾಗೂ ಒತ್ತಾಯಪೂರ್ವಕ ವಲಸೆ ವಿರುದ್ಧ ಸಮರ್ಥ ರೀತಿಯಲ್ಲಿ ಕ್ರಮಕೈಗೊಳ್ಳಲಿವೆ ಎಂಬ ಭರವಸೆ ಇದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.