ADVERTISEMENT

ಸೋಮಾಲಿಯಾ ರಾಜಧಾನಿಯಲ್ಲಿ ಅಲ್‌–ಶಬಾಬ್‌ ಉಗ್ರರ ದಾಳಿ: 10 ಮಂದಿ ಸಾವು

ಅಲ್‌ ಕೈದಾದೊಂದಿಗೆ ನಂಟು ಹೊಂದಿರುವ ಅಲ್‌–ಶಬಾಬ್‌ ಉಗ್ರರ ಗುಂಪು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಫೆಬ್ರುವರಿ 2023, 2:43 IST
Last Updated 22 ಫೆಬ್ರುವರಿ 2023, 2:43 IST
   

ಮೊಗಾದಿಶು: ಸೋಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿರುವ ಮನೆಯೊಂದರ ಮೇಲೆ ಅಲ್‌–ಶಬಾಬ್‌ ಉಗ್ರರು ದಾಳಿ ನಡೆಸಿದ್ದು, ಕನಿಷ್ಠ 10 ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಸರ್ಕಾರ ಹೇಳಿದೆ.

ಅಬ್ಡಿಡಿಯಾಸಿಝ್‌ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, 3 ಮಂದಿ ಗಾಯಗೊಂಡಿದ್ದಾರೆ. ದಾಳಿಗೀಡಾದ ಮನೆಯಲ್ಲಿ ಹಾಗೂ ಅಕ್ಕಪಕ್ಕದ ಮನೆಗಳಲ್ಲಿ ಇದ್ದ ಹಲವು ನಾಗರಿಕರನ್ನು ಭದ್ರತಾ ಪಡೆಗಳು ರಕ್ಷಣೆ ಮಾಡಿವೆ ಎಂದು ಸರ್ಕಾರ ತಿಳಿಸಿದೆ.

ಅಲ್‌ ಕೈದಾದ ಬೆಂಬಲ ಹೊಂದಿರುವ ಅಲ್‌–ಶಬಾಬ್‌ ಉಗ್ರ ಸಂಸ್ಥೆಯು ಘಟನೆಯ ಹೊಣೆ ಹೊತ್ತುಕೊಂಡಿದೆ.

ADVERTISEMENT

ಇತ್ತೀಚೆಗಷ್ಟೇ ಅಮೆರಿಕ ಹಾಗೂ ಆಫ್ರಿಕನ್‌ ಯೂನಿಯನ್‌ನ ಸೇನೆಗಳ ಬೆಂಬಲದಿಂದ ಸೋಮಾಲಿಯಾದ ಭದ್ರತಾ ಪಡೆಗಳು ಅಲ್‌–ಶಬಾಬ್‌ ವಶದಲ್ಲಿದ್ದ ಹಲವು ಸ್ಥಳಗಳನ್ನು ವಶಕ್ಕೆ ಪಡೆದುಕೊಂಡಿದ್ದವು.

ಆದರೂ ಇನ್ನೂ ಹಲವು ಸ್ಥಳಗಳು ಅಲ್–ಶಬಾಬ್‌ ಉಗ್ರರ ವಶದಲ್ಲಿದ್ದು, ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.