ADVERTISEMENT

ಲಂಡನ್‌ಗೆ ವಿದೇಶಾಂಗ ಸಚಿವ ಜಯಶಂಕರ್‌

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 19:27 IST
Last Updated 10 ಜುಲೈ 2019, 19:27 IST

ಲಂಡನ್: ಕಾಮನ್ವೆಲ್ತ್ ವಿದೇಶಾಂಗ ವ್ಯವಹಾರಗಳ ಸಚಿವರ ಸಭೆಯಲ್ಲಿ ಭಾಗವಹಿಸಲು ಭಾರತದ ವಿದೇಶಾಂಗ ಸಚಿವ ಎಸ್‌. ಜಯಶಂಕರ್‌ ಅವರು ಬುಧವಾರ ಲಂಡನ್‌ ತಲುಪಿದರು.

ಸಮಯಾವಕಾಶ ದೊರೆತರೆ ಇಂಗ್ಲೆಂಡ್‌ನ ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಾಂಟ್‌ ಅವರೊಂದಿಗೆ ಸಚಿವ ಜಯ್‌ಶಂಕರ್‌ ಅವರು ಮಾತುಕತೆ ನಡೆಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಕಾಮನ್‌ವೆಲ್ತ್‌ ಸಂಸ್ಥೆಗೆ 70 ವರ್ಷ ತುಂಬುತ್ತಿದ್ದು, ಒಕ್ಕೂಟದ ಭವಿಷ್ಯದ ತಂತ್ರಗಳ ಕುರಿತು ಸಭೆ ಕರೆಯಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.