ADVERTISEMENT

ಇಂಡೊನೇಷ್ಯಾ: ನದಿ ಸ್ವಚ್ಛತೆಗೆ ತೆರಳಿದ್ದ 11 ಮಕ್ಕಳು ನೀರುಪಾಲು, 10 ಮಂದಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 10:23 IST
Last Updated 16 ಅಕ್ಟೋಬರ್ 2021, 10:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಕಾರ್ತ, ಇಂಡೊನೇಷ್ಯಾ: ಇಂಡೊನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ನದಿ ಸ್ವಚ್ಛತೆಗಾಗಿ ತೆರಳಿದ್ದವರ ಪೈಕಿ 11 ವಿದ್ಯಾರ್ಥಿಗಳು ನೀರು ಪಾಲಾಗಿದ್ದು, 10 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಇಸ್ಲಾಮಿಕ್‌ ಜೂನಿಯರ್‌ ಪ್ರೌಢಶಾಲೆಯ 150 ವಿದ್ಯಾರ್ಥಿಗಳು ಶುಕ್ರವಾರ ಸಿಲಿಯೂರ್‌ ನದಿ ತೀರದ ಉದ್ದಕ್ಕೂ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ಈ ವೇಳೆ 21 ಮಕ್ಕಳು ನದಿಯಲ್ಲಿ ಜಾರಿ ಬಿದ್ದಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು.

‘ನದಿಯಲ್ಲಿ ಯಾವುದೇ ಪ್ರವಾಹ ಇರಲಿಲ್ಲ. ಹವಾಮಾನವೂ ಸಾಮಾನ್ಯವಾಗಿತ್ತು. ನೀರಿನಲ್ಲಿ ಮುಳುಗಿದ ಮಕ್ಕಳು ಪರಸ್ಪರ ಕೈಗಳನ್ನು ಹಿಡಿದಿದ್ದರು. ಈ ವೇಳೆ ಒಬ್ಬ ವಿದ್ಯಾರ್ಥಿ ನೀರಿನ ಸೆಳೆತಕ್ಕೆ ಸಿಲುಕಿದ್ದಾನೆ. ಉಳಿದವರೂ ಅವನ ಜೊತೆ ನೀರುಪಾಲಾಗಿದ್ದಾರೆ’ ಎಂದು ಬಾಂಡುಂಗ್‌ ಶೋಧ ಮತ್ತು ರಕ್ಷಣಾ ಕಚೇರಿಯ ಮುಖ್ಯಸ್ಥ ದೇಡೆನ್‌ ರಿದ್ವಾನ್‌ಸೇ ಹೇಳಿದರು.

ADVERTISEMENT

ಹತ್ತಿರದಲ್ಲಿಯ ಜನರು ಮತ್ತು ರಕ್ಷಣಾ ಸಿಬ್ಬಂದಿ 10 ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.