ಗುಂಡಿನ ದಾಳಿ
ಮೆಕ್ಸಿಕೊ ನಗರ: ಮೆಕ್ಸಿಕೊದ ವಾಯವ್ಯದಲ್ಲಿರುವ ಗುವಾನಾಜುವಾಟೊ ರಾಜ್ಯದ ಇರಾಪುವಾಟೊ ನಗರದಲ್ಲಿ ಪಾರ್ಟಿ ವೇಳೆ ಗುಂಡಿನ ದಾಳಿ ನಡೆದಿದ್ದು 12 ಜನರು ಮೃತಪಟ್ಟಿದ್ದಾರೆ.
ಸೇಂಟ್ ಜಾನ್ ಬ್ಯಾಪ್ಟಿಸ್ಟ್ ಚರ್ಚ್ ಈ ಪಾರ್ಟಿಯನ್ನು ಆಯೋಜನೆ ಮಾಡಿತ್ತು.
ಚರ್ಚ್ ಎದುರಿನ ರಸ್ತೆಯಲ್ಲಿ ನೂರಾರು ಜನರು ನೃತ್ಯ ಮಾಡುತ್ತಿದ್ದರು. ಈ ವೇಳೆ ಶೂಟೌಟ್ ನಡೆದಿದ್ದು 12 ಜನರು ಮೃತಪಟ್ಟು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮೆಕ್ಸಿಕನ್ ಪೊಲೀಸ್ ಅಧಿಕಾರಿ ಗೋಮೆಜ್ ಸರ್ವಾಂಟೆಸ್ ತಿಳಿಸಿದ್ದಾರೆ.
ಮೆಕ್ಸಿಕೊ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ದಾಳಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ತನಿಖೆಗೆ ಆದೇಶ ಮಾಡಿದ್ದಾರೆ.
ಗುವಾನಾಜುವಾಟೊದಲ್ಲಿ ಹತ್ತಾರು ಉಗ್ರರ ಗುಂಪುಗಳು ಸಕ್ರಿಯವಾಗಿವೆ. ಇಲ್ಲಿನ ಅತ್ಯಂತ ಹಿಂಸಾತ್ಮಕ ರಾಜ್ಯಗಳಲ್ಲಿ ಇದು ಒಂದಾಗಿದೆ. ಕಳೆದ 5 ತಿಂಗಳಲ್ಲಿ 1,435 ಹತ್ಯೆಗಳು ನಡೆದಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.