ADVERTISEMENT

ದುಬೈ: ಗಿನ್ನಿಸ್‌ ವಿಶ್ವ ದಾಖಲೆ ಬರೆದ ಭಾರತದ 12 ವರ್ಷದ ಬಾಲಕ

ಪಿಟಿಐ
Published 24 ಡಿಸೆಂಬರ್ 2020, 13:31 IST
Last Updated 24 ಡಿಸೆಂಬರ್ 2020, 13:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದುಬೈ: ಒಂದು ನಿಮಿಷದಲ್ಲಿ ಅತ್ಯಧಿಕ ಏರ್‌ಲೈನ್ಸ್‌ಗಳ ಲಾಂಛನಗಳನ್ನು ಗುರುತಿಸಿದ ಯುಎಇಯಲ್ಲಿರುವ 12 ವರ್ಷದ ಭಾರತೀಯ ಬಾಲಕನೊಬ್ಬ ಗಿನ್ನಿಸ್‌ ವಿಶ್ವ ದಾಖಲೆ ಮಾಡಿದ್ದಾನೆ ಎಂದು ಮಾಧ್ಯಮವೊಂದು ಗುರುವಾರ ಉಲ್ಲೇಖಿಸಿದೆ.

ಅಬುಧಾಬಿಯಲ್ಲಿ ಮನೆಯಲ್ಲಿಯೇ ಶಿಕ್ಷಣ ಪಡೆಯುತ್ತಿರುವ ಬಾಲಕ ಸಿದ್ಧಾಂತ್‌ ಗಂಬೆರ್‌, 1 ನಿಮಿಷದಲ್ಲಿ 39 ಏರ್‌ಲೈನ್ಸ್‌ಗಳ ಲಾಂಛನವನ್ನು ಗುರುತಿಸಿದ್ದಾನೆ. ಜೊತೆಗೆ ಅತಿ ಕಡಿಮೆ ವಯಸ್ಸಿನಲ್ಲೇ ವಿಶ್ವದ 100 ಅತಿ ಎತ್ತರದ ಕಟ್ಟಡಗಳನ್ನು ಗುರುತಿಸಿದ ಕಾರಣಕ್ಕೆ ಈ ಹಿಂದೆ ‘ಇಂಡಿಯಾ ಬುಕ್‌ ಆಫ್‌ ವಲ್ಡ್‌ ರೆಕಾರ್ಡ್ಸ್‌’ ಕೀರ್ತಿಯನ್ನು ಹರಿಯಾಣ ಮೂಲದ ಸಿದ್ಧಾಂತ್‌ ಪಡೆದಿದ್ದಾನೆ. ಕಳೆದ ತಿಂಗಳು ಗಿನ್ನಿಸ್‌ ವಿಶ್ವ ದಾಖಲೆಯನ್ನು ಸಿದ್ಧಾಂತ್‌ ಬರೆದಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಸಣ್ಣ ವಯಸ್ಸಿನಿಂದಲೇ ಲಿಗೊ ಆಟದಲ್ಲಿ ನಾನು ಆಸಕ್ತಿ ಹೊಂದಿದ್ದೆ. ನಾನು, ನನ್ನ ತಂದೆ ಸೇರಿಕೊಂಡು ರಾಕೆಟ್‌, ವಿಮಾನ, ಕಟ್ಟಡ, ವಾಹನ ಮುಂತಾದ ಮಾದರಿಗಳನ್ನು ತಯಾರಿಸುತ್ತಿದ್ದೆವು. ಏರ್‌ಲೈನ್ಸ್‌ ಕಂಪನಿಗಳ ಲಾಂಛನವನ್ನು ಗುರುತಿಸಲು ಪವರ್‌ಪಾಯಿಂಟ್‌ ಮೂಲಕ ನನ್ನ ತಾಯಿ ಸಹಾಯ ಮಾಡುತ್ತಿದ್ದರು’ ಎಂದು ಸಿದ್ಧಾಂತ್‌ ಹೇಳಿದ್ದಾರೆ.

ADVERTISEMENT

‘ಒಂದು ಚಿತ್ರವನ್ನು ನೋಡಿದರೆ, ಅದನ್ನು ಸಿದ್ಧಾಂತ್‌ ಮರೆಯುವುದಿಲ್ಲ. ಒಂದು ಏರ್‌ಲೈನ್‌ ಲಾಂಛನವನ್ನು ಕೇವಲ 1.5 ಸೆಕೆಂಡ್‌ಗಳಲ್ಲಿ ಆತ ಗುರುತಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ’ ಎಂದು ಸಿದ್ಧಾಂತ್‌ ತಾಯಿ ಮೋನಿಶಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.