ADVERTISEMENT

ಅರ್ಮೇನಿಯಾದ ಸೇನಾ ನೆಲೆಯಲ್ಲಿ ಬೆಂಕಿ ಅವಘಡ: 15 ಯೋಧರ ಸಾವು

ಏಜೆನ್ಸೀಸ್
Published 19 ಜನವರಿ 2023, 12:29 IST
Last Updated 19 ಜನವರಿ 2023, 12:29 IST
ಅಗ್ನಿ ಅನಾಹುತಕ್ಕೀಡಾದ ಸೇನಾ ಬ್ಯಾರಕ್‌
ಅಗ್ನಿ ಅನಾಹುತಕ್ಕೀಡಾದ ಸೇನಾ ಬ್ಯಾರಕ್‌    

ಯೆರೆವಾನ್, ಅರ್ಮೇನಿಯಾ: ಪೂರ್ವ ಅರ್ಮೇನಿಯಾದ ಗೆಘರ್ಕುನಿಕ್ ಪ್ರಾಂತ್ಯದ ಅಜತ್‌ ಗ್ರಾಮದ ಬಳಿ ಇರುವ ಮಿಲಿಟರಿ ನೆಲೆಯಲ್ಲಿ ಗುರುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ 15 ಸೈನಿಕರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಈ ಘಟನೆಯಲ್ಲಿ ಏಳು ಜನ ಗಾಯಗೊಂಡಿದ್ದು, ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸ್ಟೌ ಉರಿಸಲು ಯೋಧರು ಗ್ಯಾಸೋಲಿನ್‌ ಬಳಸಿದ ಸಂದರ್ಭದಲ್ಲಿ ಬೆಂಕಿ ಹೊತ್ತುಕೊಂಡಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.