ADVERTISEMENT

159 ತಾಸು ಕೆಲಸದ ಒತ್ತಡ: ವರದಿಗಾರ್ತಿ ಸಾವು

ಪಿಟಿಐ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
159 ತಾಸು ಕೆಲಸದ ಒತ್ತಡ: ವರದಿಗಾರ್ತಿ ಸಾವು
159 ತಾಸು ಕೆಲಸದ ಒತ್ತಡ: ವರದಿಗಾರ್ತಿ ಸಾವು   

ಟೋಕಿಯೊ: ಜಪಾನ್‌ ಸರ್ಕಾರಿ ಮಾಧ್ಯಮ ಎನ್‌ಎಚ್‌ಕೆ ತನ್ನ ಸೇವಾ ನೀತಿಯಲ್ಲಿ ಸುಧಾರಣೆ ತರಲು ನಿರ್ಧರಿಸಿದೆ.

ಸಂಸ್ಥೆಯ ವರದಿಗಾರ್ತಿಯೊಬ್ಬರು ಅಧಿಕ ಕೆಲಸದ ಒತ್ತಡದಿಂದ ಮೃತಪಟ್ಟಿದ್ದೇ ಈ ಕ್ರಮ ಕೈಗೊಳ್ಳಲು ಕಾರಣವಾಗಿದೆ ಎಂದು ಹೇಳಲಾಗಿದೆ.

ಎನ್‌ಎಚ್‌ಕೆ ವರದಿಗಾರ್ತಿ ಮಿವಾ ಸಡೊ (31), ಒಂದು ತಿಂಗಳಲ್ಲಿ 159 ತಾಸು ಹೆಚ್ಚುವರಿ ಅವಧಿ ಕಾರ್ಯನಿರ್ವಹಿಸಿದ್ದರು. ಈ ಒತ್ತಡದಿಂದ 2013ರ ಜುಲೈನಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು ಎನ್ನುವ ವಿಷಯವನ್ನು ಸಂಸ್ಥೆ ಈಗ ಬಹಿರಂಗಪಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.