ADVERTISEMENT

ಅಮೆರಿಕ: ಆಭರಣ ಮಳಿಗೆಗಳಲ್ಲಿ ದರೋಡೆ– 16 ಮಂದಿ ಬಂಧನ

ಪಿಟಿಐ
Published 1 ಸೆಪ್ಟೆಂಬರ್ 2023, 16:10 IST
Last Updated 1 ಸೆಪ್ಟೆಂಬರ್ 2023, 16:10 IST
.
.   

ವಾಷಿಂಗ್ಟನ್‌: ಕಳೆದ ಒಂದು ವರ್ಷದಲ್ಲಿ ಅಮೆರಿಕದ ನಾಲ್ಕು ರಾಜ್ಯಗಳಲ್ಲಿರುವ ಭಾರತ ಸೇರಿದಂತೆ ಏಷ್ಯಾ ಮೂಲದ ಆಭರಣಗಳ ಮಳಿಗೆಗಳನ್ನು ಗುರಿಯಾಗಿಸಿಕೊಂಡು ದರೋಡೆ ಮಾಡಿದ್ದ ಪ್ರಮುಖ ಅಪರಾಧಿ ಗುಂಪೊಂದರ 16 ಮಂದಿ ಸದಸ್ಯರನ್ನು ಬಂಧಿಸಲಾಗಿದೆ.

‘ಕಾನೂನು ಜಾರಿ ಸಂಸ್ಥೆಯು ಗುಂಪಿನ 8 ಶಂಕಿತ ಸದಸ್ಯರನ್ನು ಬುಧವಾರ ಬಂಧಿಸಿದೆ. ಉಳಿದ 8 ಮಂದಿಯನ್ನು ಇದಕ್ಕೂ ಮುನ್ನವೇ ಬಂಧಿಸಲಾಗಿತ್ತು’ ಎಂದು ಕೊಲಂಬಿಯಾ ಜಿಲ್ಲೆಯ ಅಮೆರಿಕ ಅಟಾರ್ನಿ ಕಚೇರಿಯ ಪ್ರಕಟಣೆ ತಿಳಿಸಿದೆ.

‘2022ರ ಜನವರಿ 7ರಿಂದ 2023ರ ಜನವರಿ 27ರವರೆಗೆ ನ್ಯೂಜೆರ್ಸಿ, ಪೆನ್ಸಿಲ್ವೇನಿಯಾ, ವರ್ಜಿನಿಯಾ ಮತ್ತು ಫ್ಲಾರಿಡಾಗಳಲ್ಲಿ ನಡೆದಿದ್ದ ದರೋಡೆಗಳಿಗೆ ಆರೋಪಿಗಳು ಸಂಚು ರೂಪಿಸಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆ.

ADVERTISEMENT

‘ದಕ್ಷಿಣ ಏಷ್ಯಾಕ್ಕೆ ಸೇರಿದ ಒಟ್ಟು ಒಂಬತ್ತು ಆಭರಣ ಮಳಿಗೆಗಳಲ್ಲಿ ಈ ಗುಂಪಿನಿಂದ ದರೋಡೆ ನಡೆದಿದೆ. ಈ ಮಳಿಗೆಗಳ ಪೈಕಿ ಕನಿಷ್ಠ ನಾಲ್ಕು ಮಳಿಗೆಗಳಿಗೆ ಭಾರತೀಯ ಮೂಲದವರು ಮಾಲೀಕರಾಗಿದ್ದಾರೆ’ ಎಂದು ಹೇಳಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.