ADVERTISEMENT

ಸುಡಾನ್‌ ರಾಜಧಾನಿ ಮೇಲೆ ವಾಯುದಾಳಿ; 18 ಸಾವು

ಎಎಫ್‌ಪಿ
Published 1 ಜೂನ್ 2023, 16:56 IST
Last Updated 1 ಜೂನ್ 2023, 16:56 IST
Mother, daughter among five electrocuted to death in Ghaziabad
Mother, daughter among five electrocuted to death in Ghaziabad   

ಖಾರ್ಟೂಮ್‌: ಸುಡಾನ್‌ ರಾಜಧಾನಿ ಖಾರ್ಟೂಮ್‌ನ ಮಾರುಕಟ್ಟೆ ಪ್ರದೇಶದ ಮೇಲೆ ಅಲ್ಲಿಯ ಸೇನೆಯು ಬುಧವಾರ ವಾಯುದಾಳಿ ನಡೆಸಿದೆ. ದಾಳಿಯಲ್ಲಿ 18 ಜನರು ಮೃತಪಟ್ಟಿದ್ದು 106 ಜನರು ಗಾಯಗೊಂಡಿದ್ದಾರೆ. ಕದನವಿರಾಮ ಮಾತುಕತೆಯಿಂದ ಸುಡಾನ್‌ ಸೇನೆ ಹಿಂದೆ ಸರಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

ಸೇನಾ ಮುಖ್ಯಸ್ಥ ಅಬ್ಡೆಲ್‌ ಫಾತ್ಹಾ ಅಲ್‌– ಬುರ್ಹಾನ್‌ ಅವರ ನಿಷ್ಠ ಸೇನಾ ಸಿಬ್ಬಂದಿ ಉತ್ತರ ಮತ್ತು ದಕ್ಷಿಣ ಖಾರ್ಟೂಮ್‌ನಲ್ಲಿ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳ ಮೇಲೆ ತೀವ್ರವಾಗಿ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸುಡಾನ್‌ನಲ್ಲಿ ಘರ್ಷಣೆಗಿಳಿದಿರುವ ಸೇನೆ ಮತ್ತು ಸಶಸ್ತ್ರ ಬಂಡುಕೋರ ಗುಂಪು ಮೇಲಿಂದ ಮೇಲೆ ಕದನವಿರಾಮ ಉಲ್ಲಂಘಿಸುತ್ತಿವೆ. ಉಭಯ ಬಣಗಳು ಮಾತುಕತೆಗೆ ತಯಾರಾದ ಬಳಿಕವೇ ಅಮೆರಿಕ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುತ್ತದೆ ಎಂದು ಅಮೆರಿಕ ಗುರುವಾರ ಎಚ್ಚರಿಸಿದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.