ADVERTISEMENT

ಟೆಕ್ಸಾಸ್‌ ಡೇರಿ ಫಾರ್ಮ್‌ನಲ್ಲಿ ಸ್ಪೋಟ: 18 ಸಾವಿರ ಹಸುಗಳು ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಏಪ್ರಿಲ್ 2023, 15:48 IST
Last Updated 13 ಏಪ್ರಿಲ್ 2023, 15:48 IST
ಟೆಕ್ಸಾಸ್‌ ಡೇರಿ ಫಾರ್ಮ್‌ನಲ್ಲಿ ಸ್ಪೋಟ: 18 ಸಾವಿರ ಹಸುಗಳು ಸಾವು
ಟೆಕ್ಸಾಸ್‌ ಡೇರಿ ಫಾರ್ಮ್‌ನಲ್ಲಿ ಸ್ಪೋಟ: 18 ಸಾವಿರ ಹಸುಗಳು ಸಾವು   

ಟೆಕ್ಸಾಸ್: ಡೇರಿ ಫಾರ್ಮ್ ಒಂದರಲ್ಲಿ ದೊಡ್ಡ ಸ್ಪೋಟ ಸಂಭವಿಸಿ ಸುಮಾರು 18 ಸಾವಿರಕ್ಕೂ ಹೆಚ್ಚು ಹಸುಗಳು ಮೃತಪಟ್ಟಿರುವ ಘಟನೆ ಅಮೆರಿಕದ ಪಶ್ಚಿಮ ಟೆಕ್ಸಾಸ್‌ನಲ್ಲಿ ನಡೆದಿದೆ.

ಈ ಕುರಿತು ಯುಎಸ್‌ಎ ಟುಡೇ ವೆಬ್‌ಸೈಟ್ ವರದಿ ಮಾಡಿದೆ.

ಸೋಮವಾರ ಸಂಜೆ ಪಶ್ಚಿಮ ಟೆಕ್ಸಾಸ್‌ನ ಸೌತ್ ಪೋರ್ಕ್ ಡೇರಿ ಎಂಬಲ್ಲಿ ಬಾಯ್ಲರ್ ಸ್ಪೋಟದಿಂದ ಇಡಿ ಫಾರ್ಮ್ ಹೊತ್ತಿ ಉರಿದಿದೆ. ಇದರಿಂದ ಡೇರಿ ಫಾರ್ಮ್‌ನಲ್ಲಿದ್ದ 18 ಸಾವಿರ ಹಸುಗಳು ಮೃತ‍ಪಟ್ಟಿದ್ದು, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ವರದಿ ತಿಳಿಸಿದೆ.

ADVERTISEMENT

ಮೃತವಾದ ಒಂದು ಹಸುವಿನ ಬೆಲೆ ₹1.63 ಲಕ್ಷ ಇತ್ತು ಎಂದು ತಿಳಿದು ಬಂದಿದೆ. ಅಗ್ನಿಶಾಮಕ ಇಲಾಖೆಯವರು ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದು ತನಿಖೆ ಕೈಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.