ADVERTISEMENT

ಹೈಟಿ ಅಧ್ಯಕ್ಷರ ಹತ್ಯೆ: ಇಬ್ಬರು ಅಮೆರಿಕ ಪ್ರಜೆಗಳು ಸೇರಿ 17 ಶಂಕಿತರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 6:35 IST
Last Updated 9 ಜುಲೈ 2021, 6:35 IST
ಹೈಟಿ ಅಧ್ಯಕ್ಷ ಜೊವೆನೆಲ್‌ ಮೊಯಿಸ್‌ ಹತ್ಯೆಗೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾದ ಆರೋಪಿಗಳು ಮತ್ತು ಅವರಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳು.    ಎಪಿ/ಪಿಟಿಐ
ಹೈಟಿ ಅಧ್ಯಕ್ಷ ಜೊವೆನೆಲ್‌ ಮೊಯಿಸ್‌ ಹತ್ಯೆಗೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾದ ಆರೋಪಿಗಳು ಮತ್ತು ಅವರಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳು.    ಎಪಿ/ಪಿಟಿಐ   

‌ಪೋರ್ಟ್ ಒ ಪ್ರಿನ್ಸ್:ಹೈಟಿ ದೇಶದ ಅಧ್ಯಕ್ಷ ಜೊವೆನೆಲ್‌ ಮೊಯಿಸ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 17 ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಇವರಲ್ಲಿ ಇಬ್ಬರು ಅಮೆರಿಕದ ನಾಗರಿಕರಾಗಿದ್ದು, ಉಭಯ ದೇಶಗಳ ಪೌರತ್ವ ಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಶಪಡಿಸಿಕೊಂಡವರಲ್ಲಿ 15 ಮಂದಿ ಕೊಲಂಬಿಯಾದವರು ಎಂದು ಹೈಟಿಯ ರಾಷ್ಟ್ರೀಯ ಪೊಲೀಸ್‌ ಪಡೆ ಮುಖ್ಯಸ್ಥ ಲಿಯಾನ್‌ ಚಾರ್ಲ್‌ಸ್‌ ತಿಳಿಸಿದ್ದಾರೆ.

ADVERTISEMENT

ಕನಿಷ್ಠ ಆರು ಮಂದಿ ತನ್ನ ಸೇನೆಯಲ್ಲಿದ್ದರು ಎನ್ನುವುದು ತಿಳಿದು ಬಂದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಕೊಲಂಬಿಯಾ ಸರ್ಕಾರ ತಿಳಿಸಿದೆ.

ಅತ್ಯುತ್ತಮ ತನಿಖಾಧಿಕಾರಿಗಳನ್ನು ಒಳಗೊಂಡಿರುವ ತಂಡವನ್ನು ರಚಿಸಲಾಗಿದೆ. ಹೈಟಿ ಪೊಲೀಸರ ಜತೆ ಈ ತಂಡವು ಸಂಪರ್ಕದಲ್ಲಿದ್ದು, ಅಗತ್ಯ ಇರುವ ಎಲ್ಲ ಮಾಹಿತಿ ಮತ್ತು ಸಹಕಾರವನ್ನು ನೀಡಲಿದೆ ಎಂದು ಕೋಲಂಬಿಯಾದ ರಾಷ್ಟ್ರೀಯ ಪೊಲೀಸ್‌ ಪಡೆಯ ಮುಖ್ಯಸ್ಥ ಜನರಲ್‌ ಜಾರ್ಜ್‌ ಲುಯಿಸ್‌ ವರ್ಗಾಸ್‌ ವಲೆನ್ಸಿಯಾ ತಿಳಿಸಿದ್ದಾರೆ.

ಅಮೆರಿಕದ ಇಬ್ಬರನ್ನು ಜೇಮ್ಸ್‌ ಸೊಲಾಗೆಸ್‌ (35) ಮತ್ತು ಜೋಸೆಫ್‌ ವಿನ್ಸೆಂಟ್‌ (55) ಎಂದು ಗುರುತಿಸಲಾಗಿದೆ.

ಮೊಯಿಸ್‌ ಅವರನ್ನು ಬುಧವಾರ ಹತ್ಯೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.