ADVERTISEMENT

ಪಾಕಿಸ್ತಾನದಲ್ಲಿ ತೈಲ ಟ್ಯಾಂಕರ್–ಬಸ್ ಡಿಕ್ಕಿ: ಸುಟ್ಟು ಕರಕಲಾದ 20 ಜನ 

ಪಿಟಿಐ
Published 16 ಆಗಸ್ಟ್ 2022, 6:00 IST
Last Updated 16 ಆಗಸ್ಟ್ 2022, 6:00 IST
ಪಾಕಿಸ್ತಾನದಲ್ಲಿ ತೈಲ ಟ್ಯಾಂಕರ್–ಬಸ್ ಡಿಕ್ಕಿ ಸ್ಥಳದಲ್ಲಿ ಪೊಲೀಸರು ಪರಿಶೀಲಿಸಿದರು
ಪಾಕಿಸ್ತಾನದಲ್ಲಿ ತೈಲ ಟ್ಯಾಂಕರ್–ಬಸ್ ಡಿಕ್ಕಿ ಸ್ಥಳದಲ್ಲಿ ಪೊಲೀಸರು ಪರಿಶೀಲಿಸಿದರು   

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಬಸ್ ಹಾಗೂ ತೈಲ್ ಟ್ಯಾಂಕರ್ ನಡುವೆ ಭೀಕರ ಡಿಕ್ಕಿ ಸಂಭವಿಸಿ 20 ಜನ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ.

ಲಾಹೋರ್‌ನಿಂದ 350 ಕಿಮೀ ದೂರ ಇರುವ ಮುಲ್ತಾನ್–ಸುಕ್ಕೂರ್ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ ಈ ದುರ್ಘಟನೆ ನಡೆದಿದೆ. ಟ್ರಕ್‌ ಕರಾಚಿಯಿಂದ ಲಾಹೋರ್‌ಗೆ ತೆರಳುತಿತ್ತು. ಬಸ್‌ ಲಾಹೋರ್‌ನಿಂದ ಮುಲ್ತಾನ್ ನಗರಕ್ಕೆ ಹೊರಟಿತ್ತು.

ಬಸ್‌ ಚಾಲಕನ ನಿರ್ಲಕ್ಷ್ಯ ಹಾಗೂ ಅತಿ ವೇಗವೇ ಈ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪರಿಹಾರ ಕಾರ್ಯಾಚರಣೆ ಕೈಗೊಂಡರು.

ADVERTISEMENT

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 20ಜನ ಸುಟ್ಟು ಕರಕಲಾಗಿದ್ದು, ಗುರುತು ಹಿಡಿಯಲು ಸಾಧ್ಯ ಆಗುತ್ತಿಲ್ಲ. ಡಿಎನ್‌ಎ ವರದಿ ನಂತರ ಶವಗಳನ್ನು ಕುಟುಂಬಗಳಿಗೆ ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಮೂರು ದಿನದಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಎರಡನೇ ದೊಡ್ಡ ಅಪಘಾತ ಇದಾಗಿದೆ. ಭಾನುವಾರ ಪಂಜಾಬ್ ಪ್ರಾಂತ್ಯದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ 13 ಜನ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.