ADVERTISEMENT

2008ರ ಮುಂಬೈದಾಳಿ ಪಾಕಿಸ್ತಾನ ಉಗ್ರರಿಂದ ನಡೆದ ಕೃತ್ಯ: ನವಾಜ್ ಷರೀಫ್

​ಪ್ರಜಾವಾಣಿ ವಾರ್ತೆ
Published 12 ಮೇ 2018, 13:45 IST
Last Updated 12 ಮೇ 2018, 13:45 IST
ನವಾಜ್ ಷರೀಫ್
ನವಾಜ್ ಷರೀಫ್   

ನವದೆಹಲಿ: 2008ರ ಮುಂಬೈ ಹತ್ಯಾಕಾಂಡಲ್ಲಿನ ರಕ್ತದೋಕುಳಿಗೆ ಪಾಕಿಸ್ತಾನದ ಉಗ್ರರು ಕಾರಣ ಎಂದು ಪಾಕಿಸ್ತಾನದ ಮಾಜಿ ಮುಖ್ಯಮಂತ್ರಿ ನವಾಜ್ ಷರೀಫ್ ಹೇಳಿದ್ದಾರೆ.

ಪಾಕಿಸ್ತಾನ ಮಾಧ್ಯಮ ಡಾನ್ ನಡೆಸಿದ ಸಾರ್ವಜನಿಕ ಸಂದರ್ಶನದಲ್ಲಿ ಮಾತನಾಡಿದ ಷರೀಫ್, ಉಗ್ರ ಸಂಘಟನೆಗಳು ಬಹಳ ಚಟುವಟಿಕೆಯಿಂದ ಕೂಡಿವೆ. ಸರ್ಕಾರೇತರ ಸಂಘಟನೆಗಳಿಗೆ ಮುಂಬೈನಲ್ಲಿ 150 ಮಂದಿಯನ್ನು ಕೊಲ್ಲಲು ಅನುವು ಮಾಡಿಕೊಡಬೇಕೆ? ಎಂದು ಪ್ರಶ್ನಿಸಿದ್ದಾರೆ.

ಈ ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಲಷ್ಕರ್–ಎ–ತಯೆಬಾ ಉಗ್ರ ಸಂಘಟನೆಯ 10 ಉಗ್ರರು ಮುಂಬೈ ಹತ್ಯಾಕಾಂಡ ನಡೆಸಿದ್ದರು. ಉಗ್ರರ ಈ ಭೀಕರ ಕೃತ್ಯವನ್ನು ಇಡೀ ಜಗತ್ತೇ ಖಂಡಿಸಿತ್ತು. ಇದರಲ್ಲಿ 164 ಮಂದಿ ಮೃತಪಟ್ಟಿದ್ದರು. 308 ಮಂದಿ ಗಾಯಗೊಂಡಿದ್ದರು.

ADVERTISEMENT

ನಾವು ನಮ್ಮನ್ನು ಪ್ರತ್ಯೇಕಗೊಳಿಸಿಕೊಂಡಿದ್ದೇವೆ. ತ್ಯಾಗದ ಹೊರತಾಗಿಯೂ ನಾವು ನಮ್ಮ ನಡೆಯನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಅಫ್ಗಾನಿಸ್ತಾನದ ಹಾದಿಯನ್ನು ಅನುಸರಿಸಬೇಕೇ ಹೊರತು ನಮ್ಮ ಹಾದಿಯನ್ನಲ್ಲ. ನಾವು ಅವರ ಕಡೆ ಗಮನಹರಿಸಲೇ ಬೇಕು ಎಂದು ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.