ADVERTISEMENT

ಅಮೆರಿಕಕ್ಕೆ ತೆರಳಿದ ಭಾರತದ ಯುವತಿ ನಾಪತ್ತೆ

ಪಿಟಿಐ
Published 30 ಜೂನ್ 2025, 14:14 IST
Last Updated 30 ಜೂನ್ 2025, 14:14 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ವಾಷಿಂಗ್ಟನ್‌: ಮೊದಲೇ ನಿಶ್ಚಯವಾಗಿದ್ದಂತೆ ಮದುವೆಯಾಗುವುದಾಗಿ ಹೇಳಿ ಅಮೆರಿಕದ ನ್ಯೂಜೆರ್ಸಿಗೆ ತೆರಳಿದ ಭಾರತದ 24 ವರ್ಷದ ಯುವತಿ ಕಾಣೆಯಾಗಿದ್ದಾರೆ. 

ಸಿಮ್ರನ್‌ ಎಂದು ಗುರುತಿಸಲಾಗಿರುವ ಯುವತಿ ಜೂ.20ರಂದು ಭಾರತದಿಂದ ಅಮೆರಿಕಕ್ಕೆ ವಿಮಾನದಲ್ಲಿ ಬಂದಿದ್ದರು. ಬಂದಿಳಿದ ಬಳಿಕ ಅವರು ಕಾಣೆಯಾಗಿದ್ದಾರೆ. ಭಾರತದಲ್ಲಿರುವ ಆಕೆಯ ಕುಟುಂಬಸ್ಥರನ್ನು ಸಂಪರ್ಕಿಸಲು ಈವರೆಗೆ ಸಾಧ್ಯವಾಗಿಲ್ಲ ಎಂದು ಲಿಂಡೆನ್‌ವೋಲ್ಡ್ ಪೊಲೀಸರು ತಿಳಿಸಿದ್ದಾರೆ. 

ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಸಿಮ್ರನ್‌ ತನ್ನ ಮೊಬೈಲ್‌ ಫೋನ್‌ ನೋಡುತ್ತ ಯಾರಿಗಾಗಿಯೋ ಕಾಯುತ್ತಿರುವಂತೆ ಕಂಡುಬಂದಿದ್ದು, ತೊಂದರೆಯಲ್ಲಿ ಇದ್ದಂತೆ ಕಾಣಿಸಿಲ್ಲ ಎಂದಿದ್ದಾರೆ. 

ADVERTISEMENT

ಸಿಮ್ರನ್‌ಗೆ ಅಮೆರಿಕದಲ್ಲಿ ಸಂಬಂಧಿಕರೂ ಇಲ್ಲ, ಆಕೆಗೆ ಇಂಗ್ಲಿಷ್‌ ಮಾತನಾಡಲೂ ಬರುವುದಿಲ್ಲ. ಮದುವೆ ಅಥವಾ ಪ್ರವಾಸದ ಉದ್ದೇಶಕ್ಕಾಗಿ ಆಕೆ ಬಂದಿರಬಹುದು ಎಂದೂ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.