ADVERTISEMENT

ಆಗಸ್ಟ್‌ 15 ಅನ್ನು ‘ಭಾರತದ ದಿನ’ ಎಂದು ಘೋಷಿಸಿದ ಅಮೆರಿಕದ ಮೂರು ರಾಜ್ಯಗಳು

ಪಿಟಿಐ
Published 16 ಆಗಸ್ಟ್ 2022, 13:27 IST
Last Updated 16 ಆಗಸ್ಟ್ 2022, 13:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್: ಅಮೆರಿಕದ ಮೆಸಾಚುಸೆಟ್ಸ್, ರೋಡ್ ಐಲ್ಯಾಂಡ್ ಮತ್ತು ನ್ಯೂ ಹ್ಯಾಂಪ್‌ಶೈರ್ ರಾಜ್ಯಗಳು ಆಗಸ್ಟ್ 15 ಅನ್ನು ‘ಭಾರತದ ದಿನ’ ಎಂದು ಘೋಷಿಸಿವೆ.

‘ಯುವ ದೇಶವು ತನ್ನ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಆಧುನಿಕ ಭಾರತವು ಸ್ವಾತಂತ್ರ್ಯದ ನಂತರ ಶಿಕ್ಷಣ, ಆರೋಗ್ಯ, ಕೃಷಿ ಮತ್ತು ತಂತ್ರಜ್ಞಾನದಲ್ಲಿ ಅಗಾಧ ಬೆಳವಣಿಗೆಯನ್ನು ತೋರಿಸಿದೆ’ ಎಂದು ಮೆಸಾಚುಸೆಟ್ಸ್‌ ಗವರ್ನರ್ ಸಿ. ಬೇಕರ್ ಹೇಳಿದ್ದಾರೆ.ರೋಡ್ ಐಲೆಂಡ್ ಗವರ್ನರ್ ಡೇನಿಯಲ್ ಮೆಕ್ಕಿ ಮತ್ತುನ್ಯೂ ಹ್ಯಾಂಪ್‌ಶೈರ್ ಗವರ್ನರ್ ಕ್ರಿಸ್ಟೋಫರ್‌ ಟಿ. ಸುನುನು ಅವರು ಸಹ ಇಂತಹದೇ ಹೇಳಿಕೆಗಳೊಂದಿಗೆ ಭಾರತದ ಮಹತ್ವವನ್ನು ಕೊಂಡಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT