ADVERTISEMENT

ಹಾಂಗ್‌ಕಾಂಗ್ ಪ್ರತ್ಯೇಕತೆ ಪ್ರಚೋದಿಸುವ ಪೋಸ್ಟ್‌: ಹೊಸ ಕಾಯ್ದೆಯಡಿ ನಾಲ್ವರ ಸೆರೆ

ಏಜೆನ್ಸೀಸ್
Published 30 ಜುಲೈ 2020, 6:53 IST
Last Updated 30 ಜುಲೈ 2020, 6:53 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಹಾಂಗ್‌ಕಾಂಗ್‌: ಸಾಮಾಜಿಕ ಜಾಲತಾಣದಲ್ಲಿ ಹಾಂಗ್‌ಕಾಂಗ್‌ ಪ್ರತ್ಯೇಕತಾ ಭಾವನೆಯನ್ನು ಪ್ರಚೋದಿಸುವ ಪೋಸ್ಟ್‌ ಹಂಚಿಕೊಂಡಿರುವ ಆರೋಪದ ಮೇರೆಗೆ ನಾಲ್ಕು ಆರೋಪಿಗಳನ್ನುಚೀನಾದ ಹೊಸ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಹಾಂಗ್‌‌ಕಾಂಗ್‌ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಒಂದು ಯುವತಿ ಮತ್ತು ಮೂರು ಯುವಕರನ್ನು ಬಂಧಿಸಲಾಗಿದೆ. ಇವರೆಲ್ಲರೂ ವಿದ್ಯಾರ್ಥಿಗಳಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

‘ಸ್ಟೂಡೆಂಟ್‌ಲೊಕಲಿಸಂ’ ಎಂಬ ಸಂಸ್ಥೆಯ ಹೆಸರಿನಲ್ಲಿ ಈ ಪೋಸ್ಟ್‌ಅನ್ನು ಫೇಸ್‌ಬುಕ್‌ನಲ್ಲಿ ಹಾಕಲಾಗಿದೆ. ಆದರೆ ಚೀನಾದ ಹೊಸ ರಾಷ್ಟ್ರೀಯ ಭದ್ರತಾ ಕಾನೂನು ಜಾರಿಗೆ ಬರುವ ಮುನ್ನವೇ ಈ ಸಂಸ್ಥೆಯನ್ನು ವಿಸರ್ಜಿಸುವುದಾಗಿ ಹೇಳಿತ್ತು.

ADVERTISEMENT

ಸಾಮಾಜಿಕ ಜಾಲತಾಣದಲ್ಲಿ, ಹಾಂಗ್‌ಕಾಂಗ್‌ ಪ್ರತ್ಯೇಕತೆಯ ಪೋಸ್ಟ್‌ ಅನ್ನು ಹಾಕಿದವರ ಬಗ್ಗೆ ಇನ್ನೂ ತಿಳಿದಿಲ್ಲ. ಆದರೆ ಸ್ಟೂಡೆಂಟ್‌ಲೊಕಲಿಸಂ ಸಂಸ್ಥೆಯ ಮಾಜಿ ನಾಯಕರು ಮತ್ತು ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

‘ಈ ಪೋಸ್ಟ್‌ನಲ್ಲಿ ಹಾಂಗ್‌ಕಾಂಗ್‌ ಸ್ವಾತಂತ್ರ್ಯಕ್ಕಾಗಿ ಸಂಸ್ಥೆಯೊಂದನ್ನು ರಚಿಸುವುದಾಗಿ ಹೇಳಲಾಗಿತ್ತು ’ ಎಂದು ಹಿರಿಯ ಅಧಿಕಾರಿ ಲಿ ಕ್ವಾಯ್-ವಾ ಅವರು ತಿಳಿಸಿದರು.

ಚೀನಾದ ಹೊಸ ರಾಷ್ಟ್ರೀಯ ಭದ್ರತಾ ಕಾಯ್ದೆ, ಹಾಂಗ್‌ಕಾಂಗ್‌ನಲ್ಲಿ‌ ಪ್ರಜಾಪ್ರಭುತ್ವ, ಸ್ಥಳೀಯ ಸ್ವಾಯತ್ತತೆಯನ್ನು ಕಿತ್ತುಕೊಳ್ಳುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.