ADVERTISEMENT

ಟೆಕ್ಸಾಸ್‌: 100 ಅಧಿಕ ವಾಹನಗಳು ಪರಸ್ಪರ ಡಿಕ್ಕಿ, ಐವರ ಸಾವು

ಏಜೆನ್ಸೀಸ್
Published 11 ಫೆಬ್ರುವರಿ 2021, 18:46 IST
Last Updated 11 ಫೆಬ್ರುವರಿ 2021, 18:46 IST
ಟೆಕ್ಸಾಸ್‌ನಲ್ಲಿ ಸಂಭವಿಸಿದ ಸರಣಿ ಅಪಘಾತ (ಎಪಿ ಚಿತ್ರ)
ಟೆಕ್ಸಾಸ್‌ನಲ್ಲಿ ಸಂಭವಿಸಿದ ಸರಣಿ ಅಪಘಾತ (ಎಪಿ ಚಿತ್ರ)   

ಫೋರ್ಟ್‌ ವರ್ಥ್‌, ಅಮೆರಿಕ: ಮಂಜು ಬಿದ್ದಿದ್ದ ರಸ್ತೆಯಲ್ಲಿ ಚಲಿಸುತ್ತಿದ್ದ 100ಕ್ಕೂ ಅಧಿಕ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟ ಘಟನೆ ಅಮೆರಿಕದ ಟೆಕ್ಸಾಸ್‌ ನಲ್ಲಿ ಗುರುವಾರ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಹಲವಾರು ವಾಹನಗಳು ನಜ್ಜುಗುಜ್ಜಾಗಿದ್ದು, ಅವುಗಳಲ್ಲಿ ನೂರಾರು ಜನರು ಸಿಲುಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಕಾರು, ಎಸ್‌ಯುವಿ ಹಾಗೂ ಬೃಹತ್‌ ಟ್ರಕ್‌ಗಳು ಸೇರಿದಂತೆ ನಜ್ಜುಗುಜ್ಜಾಗಿರುವ ವಾಹನಗಳು ಕಿ.ಮೀ.ಗಟ್ಟಲೇ ಈ ರಸ್ತೆ ಮೇಲೆ ನಿಂತಿವೆ.

‘ರಕ್ಷಣಾ ಕಾರ್ಯ ಭರದಿಂದ ನಡೆಯುತ್ತಿದ್ದು, 30 ಜನರನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಈ ಅಪಘಾತದಲ್ಲಿ ಎಷ್ಟು ಜನರು ಗಾಯಗೊಂಡಿದ್ದಾರೆ ಎಂಬುದನ್ನು ಈಗಲೇ ಹೇಳವುದು ಕಷ್’ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ವಿಪರೀತ ಚಳಿ. ಮಳೆಯೂ ಬೀಳುತ್ತಿದೆ. ಹವಾಮಾನದಲ್ಲಿನ ಈ ವೈಪರೀತ್ಯದಿಂದಾಗಿ ರಸ್ತೆಗಳು ವಾಹನಗಳ ಓಡಾಟ ದುಸ್ತರವಾಗಿದೆ. ಜಾರುವಿಕೆಯಿಂದಾಗಿ ಈ ಅಪಘಾತ ಸಂಭವಿಸಿದೆ’ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.