ಕಾಬೂಲ್: ಇಲ್ಲಿನ ಉರುಜ್‌ಘನ್ ಹಾಗೂ ತ್ರೈಕೋಟ್ ಪ್ರದೇಶಗಳಲ್ಲಿ ನಡೆದ ವಾಯುದಾಳಿಯಲ್ಲಿ ತಾಲಿಬಾನ್ ಸಂಘಟನೆಯ ಪ್ರಮುಖ ರೂವಾರಿ ಸೇರಿದಂತೆ ಒಟ್ಟು 11 ಉಗ್ರರು ಮೃತಪಟ್ಟಿದ್ದಾರೆ.
ತಾಲಿಬಾನಿನ ಮಾವ್‌ಲಾವಿ ವಾಲಿ ಜಾನ್, ಹಮ್‌ಜಾ ಸೇರಿದಂತೆ 11 ಉಗ್ರರನ್ನು ಅಫ್ಗಾನಿ ಪಡೆ ಹತ್ಯೆಗೈದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯವಾಗಿ ಮೊದಲು ತ್ರೈಕೋಟ್ ಎಂಬಲ್ಲಿ ವಾಯುದಾಳಿ ಕೈಗೊಳ್ಳಲಾಗಿತ್ತು. ಈ ವೇಳೆ ಹಲವು ವಾಹನಗಳು, ಶಸ್ತ್ರಾಸ್ತ್ರಗಳು, ಯುದ್ಧ ಸಾಮಗ್ರಿಗಳು ನಾಶಗೊಂಡಿವೆ.
ಇದರಲ್ಲಿ ಮೃತಪಟ್ಟ ಹಮ್‌ಜಾ ಉರುಜ್‌ಘನ್ ಹಾಗೂ ತ್ರೈಕೋಟ್ ಪ್ರದೇಶಗಳಲ್ಲಿ ನಡೆಸಿದ ಉಗ್ರ ಚಟುವಟಿಕೆಗಳ ಮುಖ್ಯ ಆಯೋಜಕ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.