ಷಿಕಾಗೋ: ಪ್ರಯಾಣಿಕನೊಬ್ಬನು ಮಲವಿಸರ್ಜಿಸಿ, ಶೌಚಾಲಯವನ್ನು ಯದ್ವಾತದ್ವಾ ಗಲೀಜು ಮಾಡಿದ್ದಕ್ಕೆ ಷಿಕಾಗೋದಿಂದ ಹಾಂಕಾಂಗ್‌ಗೆ ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್ ವಿಮಾನವು ತುರ್ತು ಭೂಸ್ಪರ್ಶ ಮಾಡಿದೆ.
‘ಪ್ರಯಾಣಿಕನು ತನ್ನ ಮಲದಿಂದಲೇ ಶೌಚಾಲಯವನ್ನು ಗಲೀಜು ಮಾಡಿದ್ದನು’ ಎಂದು ಆ್ಯಂಕೊರೆಜ್ ವಿಮಾನನಿಲ್ದಾಣದ ಪೊಲೀಸ್ ಅಧಿಕಾರಿ ಜೊ ಗೆಮಾಶೆ ತಿಳಿಸಿದ್ದಾರೆ. ‘ಪ್ರಯಾಣಿಕನು ಯಾವುದೇ ಬೆದರಿಕೆ ಒಡ್ಡಿಲ್ಲ. ಅಲ್ಲದೇ ಸಿಬ್ಬಂದಿ ಜತೆಗೆ ಜಗಳ ಮಾಡಿಲ್ಲ. ಹೀಗಾಗಿ ಆತನ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ’ ಎಂದು ಅವರು ತಿಳಿಸಿದರು.
‘ಪ್ರಯಾಣಿಕ 22 ವರ್ಷದ ವಿಯೆಟ್ನಾಂ ಪಾಸ್‌ಪೋರ್ಟ್ ಹೊಂದಿದ್ದು, ಅಮೆರಿಕದ ಶಾಶ್ವತ ವಾಸ್ತವ್ಯದ ಕಾರ್ಡ್ ಹೊಂದಿದ್ದಾನೆ. ಆತನ ಮನೋಸ್ವಾಸ್ಥ್ಯವನ್ನು ತಿಳಿಯಲು ಆಸ್ಪತ್ರೆಗೆ ಕಳುಹಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.