ADVERTISEMENT

ಅಕ್ರಮ ವಲಸಿಗರ ಹಸ್ತಾಂತರಕ್ಕೆ ಭಾರತ– ಬ್ರಿಟನ್ ಒ‍ಪ್ಪಂದ

ಪಿಟಿಐ
Published 14 ಜನವರಿ 2018, 20:11 IST
Last Updated 14 ಜನವರಿ 2018, 20:11 IST

ಲಂಡನ್: ಬ್ರಿಟನ್‌ನಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ಮರಳಿಸುವ, ಅಪರಾಧ ದಾಖಲೆಗಳು ಹಾಗೂ ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳುವ ಎರಡು ಒಪ್ಪಂದಗಳಿಗೆ ಭಾರತ ಮತ್ತು ಬ್ರಿಟನ್ ಸಹಿ ಮಾಡಿವೆ.

ಬ್ರಿಟನ್‌ನ ವಲಸೆ ಸಚಿವೆ ಕರೋಲಿನ್ ನೋಕಿಸ್ ಮತ್ತು ಲಂಡನ್‌ಗೆ ಭೇಟಿ ನೀಡಿದ ಭಾರತದ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಗುರುವಾರ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಈ ಸಂಬಂಧ ಬ್ರಿಟನ್ ಸರ್ಕಾರ ಭಾನುವಾರ ಹೇಳಿಕೆ ಬಿಡುಗಡೆ ಮಾಡಿದೆ.

ಬ್ರಿಟನ್‌ನಲ್ಲಿ ಇರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಇಲ್ಲಿನ ಸರ್ಕಾರದೊಂದಿಗೆ ಭಾರತ ಮಾತುಕತೆ ನಡೆಸುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.