ADVERTISEMENT

ನಕಲಿ ಆಲ್ಕೊಹಾಲ್ ಪತ್ತೆಗೆ ಹೊಸ ಉಪಕರಣ

ಇಲಿನಾಯ್ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಅಭಿವೃದ್ಧಿ

ಪಿಟಿಐ
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST
ನಕಲಿ ಆಲ್ಕೊಹಾಲ್ ಪತ್ತೆಗೆ ಹೊಸ ಉಪಕರಣ
ನಕಲಿ ಆಲ್ಕೊಹಾಲ್ ಪತ್ತೆಗೆ ಹೊಸ ಉಪಕರಣ   

ವಾಷಿಂಗ್ಟನ್: ನಕಲಿ ಆಲ್ಕೊಹಾಲ್ ಉತ್ಪನ್ನಗಳನ್ನು ಪತ್ತೆ ಮಾಡುವ ಸುಧಾರಿತ ಸೆನ್ಸರ್‌ಗಳನ್ನು ಹೊಂದಿರುವ ನೂತನ ಉಪಕರಣವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಆಲ್ಕೊಹಾಲ್ ಗುಣಮಟ್ಟ ಖಾತ್ರಿಪಡಿಸಲು ಮಾರ್ಗವೊಂದು ದೊರಕಿದೆ.

ನೀರು ಮಿಶ್ರಣ ಮಾಡಿದ ಅಥವಾ ನಕಲಿ ಆಲ್ಕೊಹಾಲ್‌ನಿಂದ ವಂಚಕರಿಗೆ ಆರ್ಥಿಕ ಲಾಭ ಉಂಟಾಗಬಹುದು. ಆದರೆ ಇದನ್ನು ಸೇವಿಸುವುದರಿಂದ ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

ಕಳೆದ ಕೆಲವು ವರ್ಷಗಳಲ್ಲಿ ಇಂಡೋನೇಷ್ಯಾ, ಮೆಕ್ಸಿಕೊ, ಚೀನಾ, ಪೊಲ್ಯಾಂಡ್, ರಷ್ಯಾ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಕಲಬೆರಕೆ ಆಲ್ಕೊಹಾಲ್ ಸೇವನೆಯಿಂದ ಸಾವುಗಳು ಸಂಭವಿಸಿರುವ ವರದಿ ಆಗಿದೆ.

ADVERTISEMENT

ಇದಕ್ಕೆ ಪರಿಹಾರ ಕಂಡುಹಿಡಿಯಲು ಅಮೆರಿಕದ ಇಲಿನಾಯಿಸ್ ವಿಶ್ವವಿದ್ಯಾಲಯದ ಕೆನೆತ್ ಎಸ್‌ ಸುಸ್ಲಿಕ್ ಹಾಗೂ ಝೆಂಗ್ ಲಿ ಅವರು ಈ ಉ‍ಪಕರಣ ಅಭಿವೃದ್ಧಿಪಡಿಸಿದ್ದಾರೆ.ನಿರ್ದಿಷ್ಟ ಕಲಬೆರಕೆ ವಸ್ತುಗಳು ಆಲ್ಕೊಹಾಲ್‌ನಲ್ಲಿ ಬೆರೆತಿದ್ದರೆ, ತಕ್ಷಣ ಬಣ್ಣದ ಮೂಲಕ ಅದು ತಿಳಿಯುವ ರೀತಿ, 36 ವಿಧದ ಬಣ್ಣಗಳನ್ನು ಹೊಂದಿರುವ ಸೆನ್ಸರ್‌ಗಳನ್ನು ಸಿದ್ಧಪಡಿಸಿದ್ದಾರೆ.

ವಿಜ್ಞಾನಿಗಳು ಈ ಉಪಕರಣ ಬಳಸಿ ಸ್ಕಾಚ್‌, ವಿಸ್ಕಿ, ಬಾರ್ಬನ್, ರಾಯ್, ಬ್ರಾಂಡಿ ಹಾಗೂ ವೋಡ್ಕ ಸೇರಿದಂತೆ 14 ವಿವಿಧ ಆಲ್ಕೊಹಾಲ್‌ಗಳಲ್ಲಿರುವ ಅಂಶಗಳನ್ನು ಹಾಗೂ ಅವುಗಳ ಬ್ರ್ಯಾಂಡ್‌ಗಳನ್ನು ಶೇ 99ರಷ್ಟು ನಿಖರತೆಯೊಂದಿಗೆ ಪತ್ತೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.