ADVERTISEMENT

ಶ್ರೀಲಂಕಾ ಅಧ್ಯಕ್ಷರ ಅಧಿಕಾರ ಅವಧಿ ಐದು ವರ್ಷ: ‘ಸುಪ್ರೀಂ’

ಪಿಟಿಐ
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST
ಶ್ರೀಲಂಕಾ ಅಧ್ಯಕ್ಷರ ಅಧಿಕಾರ ಅವಧಿ ಐದು ವರ್ಷ: ‘ಸುಪ್ರೀಂ’
ಶ್ರೀಲಂಕಾ ಅಧ್ಯಕ್ಷರ ಅಧಿಕಾರ ಅವಧಿ ಐದು ವರ್ಷ: ‘ಸುಪ್ರೀಂ’   

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಅಧಿಕಾರ ಅವಧಿ ಐದು ವರ್ಷ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ.

1978ರ ಸಂವಿಧಾನದ ಪ್ರಕಾರ ಅಧ್ಯಕ್ಷರ ಅಧಿಕಾರ ಅವಧಿ‌ ಆರು ವರ್ಷ. ಆದರೆ, 2015ರ ಮೇನಲ್ಲಿ ಸಂವಿಧಾನಕ್ಕೆ 19ನೇ ತಿದ್ದುಪಡಿ ತಂದಿದ್ದು, ಇದರ ಅನ್ವಯ ಅಧ್ಯಕ್ಷರ ಅವಧಿ ಐದು ವರ್ಷ. ಸಿರಿಸೇನಾ ಅವರು ತಿದ್ದುಪಡಿ ಜಾರಿಗೆ ಬರುವ ಮೊದಲೇ (ಜನವರಿ 2015) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದರಿಂದಾಗಿ ಇವರ ಅವಧಿ ಐದು ವರ್ಷವೋ, ಆರು ವರ್ಷವೋ ಎಂಬ ಬಗ್ಗೆ ಗೊಂದಲವಿತ್ತು.

ಹೀಗಾಗಿ ಸ್ವತಃ ಸಿರಿಸೇನಾ ಅವರೇ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಕೋರ್ಟ್‌ ತೀರ್ಪಿನಿಂದಾಗಿ ಗೊಂದಲಕ್ಕೆ ತೆರೆಬಿದಿದ್ದು, ಸಿರಿಸೇನಾ ಅಧಿಕಾರ ಅವಧಿ 2020ರ ಜನವರಿಯಲ್ಲಿ ಕೊನೆಗೊಳ್ಳಲಿದೆ. ಹೊಸ ಅಧ್ಯಕ್ಷರ ಆಯ್ಕೆಗೆ 2019ರ ನವೆಂಬರ್‌ನಲ್ಲಿ ಚುನಾವಣೆ ಘೋಷಣೆಯಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.