ADVERTISEMENT

‘ರೋಹಿಂಗ್ಯಾ ಮುಸ್ಲಿಮರ ಶಿಬಿರ ಮುಂದಿನ ವಾರ ಸಿದ್ಧ’

ಏಜೆನ್ಸೀಸ್
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST
ಬಾಂಗ್ಲಾದೇಶದ ಕಾಕ್ಸ್ ಬಜಾರ್‌ ಸಮೀಪ ಇರುವ ಬಲುಖಲಿ ನಿರಾಶ್ರಿತರ ಶಿಬಿರದಿಂದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದ ರೋಹಿಂಗ್ಯಾ ನಿರಾಶ್ರಿತರು  –ರಾಯಿಟರ್ಸ್ ಚಿತ್ರ
ಬಾಂಗ್ಲಾದೇಶದ ಕಾಕ್ಸ್ ಬಜಾರ್‌ ಸಮೀಪ ಇರುವ ಬಲುಖಲಿ ನಿರಾಶ್ರಿತರ ಶಿಬಿರದಿಂದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದ ರೋಹಿಂಗ್ಯಾ ನಿರಾಶ್ರಿತರು –ರಾಯಿಟರ್ಸ್ ಚಿತ್ರ   

ಬ್ಯಾಂಕಾಕ್: ಬಾಂಗ್ಲಾದೇಶದಿಂದ ಹಿಂದಿರುಗುವ ರೋಹಿಂಗ್ಯಾ ಮುಸ್ಲಿಮರು ಹಾಗೂ ಹಿಂದೂ ನಿರಾಶ್ರಿತರಿಗಾಗಿ, ಈ ಮೊದಲು ನೀಡಿದ್ದ ಗಡುವಿನಂತೆ ಮುಂದಿನ ವಾರದ ವೇಳೆಗೆ ಶಿಬಿರ ಸಿದ್ಧವಾಗಲಿದೆ ಎಂದು ಮ್ಯಾನ್ಮಾರ್ ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಮ್ಯಾನ್ಮಾರ್‌ನಲ್ಲಿ ಗಲಭೆ ಉಂಟಾದಾಗ ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದ ರೋಹಿಂಗ್ಯಾ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವುದಕ್ಕಾಗಿ ಬಾಂಗ್ಲಾದೇಶದ ಜತೆ ಮ್ಯಾನ್ಮಾರ್ ಕಳೆದ ನವೆಂಬರ್‌ನಲ್ಲಿ ಒಪ್ಪಂದ ಮಾಡಿಕೊಂಡಿತ್ತು.

‘ಎಷ್ಟು ಮಂದಿ ರೋಹಿಂಗ್ಯಾ ಮುಸ್ಲಿಮರಿಗೆ ಮ್ಯಾನ್ಮಾರ್‌ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ ಹಾಗೂ ಶಿಬಿರಗಳಲ್ಲಿ ಇರಿಸಲು ಅವರನ್ನು ಹೇಗೆ ತಪಾಸಣೆ ಮಾಡಲಾಗುತ್ತದೆ ಎನ್ನುವ ಕುರಿತು ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದ ಅಧಿಕಾರಿಗಳು ಮ್ಯಾನ್ಮಾರ್ ರಾಜಧಾನಿ ನೆಪಿಟಾದಲ್ಲಿ ಸಭೆ ನಡೆಸಲಿದ್ದಾರೆ’ ಎಂದು ಸಾಮಾಜಿಕ ಅಭಿವೃದ್ಧಿ, ಪರಿಹಾರ ಹಾಗೂ ಪುನರ್ವಸತಿ ಸಚಿವ ವಿನ್ ಮ್ಯಾಟ್ ಅಯ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.