ADVERTISEMENT

ಚೀನಾ: ‘ಕೆಜೆ–600’ ಕಣ್ಗಾವಲು ವಿಮಾನ ಅಭಿವೃದ್ಧಿ

ಪಿಟಿಐ
Published 27 ಜನವರಿ 2018, 19:30 IST
Last Updated 27 ಜನವರಿ 2018, 19:30 IST
ಚೀನಾ: ‘ಕೆಜೆ–600’ ಕಣ್ಗಾವಲು ವಿಮಾನ ಅಭಿವೃದ್ಧಿ
ಚೀನಾ: ‘ಕೆಜೆ–600’ ಕಣ್ಗಾವಲು ವಿಮಾನ ಅಭಿವೃದ್ಧಿ   

ಬೀಜಿಂಗ್‌: ವಿಮಾನವಾಹಕ ನೌಕೆಯಿಂದ ಕಾರ್ಯಾಚರಿಸುವ ಕಣ್ಗಾವಲು ವಿಮಾನವನ್ನು ಚೀನಾ ಅಭಿವೃದ್ಧಿಪಡಿಸಿದೆ. ಶತ್ರುವಿನ ರಹಸ್ಯ ವಿಮಾನಗಳನ್ನು ಪತ್ತೆಹಚ್ಚಲು ಈ ವಿಮಾನವು ರಾಡಾರ್‌ ಸೌಲಭ್ಯವನ್ನು ಹೊಂದಿದೆ.

‘ಮುಂಚಿತವಾಗಿ ಮುನ್ಸೂಚನೆ ನೀಡುವ  ‘ಕೆಜೆ–600’ ಹೆಸರಿನ ಕಣ್ಗಾವಲು ವಿಮಾನವನ್ನು ಚೀನಾ ಇದೇ ಮೊದಲ ಬಾರಿಗೆ ಅಭಿವೃದ್ಧಿಪಡಿಸಿದೆ’ ಎಂದು ಹಾಂಗ್‌ಕಾಂಗ್‌ ಮೂಲದ ಸೌತ್‌ಚೈನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ.

‘ಏಷ್ಯಾ–ಪೆಸಿಫಿಕ್‌ ಹಾಗೂ ಜಪಾನ್‌ನ ವಾಯುನೆಲೆಯಲ್ಲಿ ಎಫ್‌–35 ರಹಸ್ಯ ವಿಮಾನಗಳನ್ನು ನಿಯೋಜಿಸುವುದಾಗಿ ವಿಶ್ವಸಂಸ್ಥೆ ಕಳೆದ ವರ್ಷ ಘೋಷಿಸಿತ್ತು. ಈ ಬೆಳವಣಿಗೆಯೂ ಚೀನಾ ವಾಯುರಕ್ಷಣೆ ಮೇಲೆಯೇ ದೊಡ್ಡ ಮಟ್ಟಿನ ಸವಾಲೊಡ್ಡಿತ್ತು’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

‘ಕೆಜೆ – 600 ಕಣ್ಗಾವಲು ವಿಮಾನವೂ ಅಮೆರಿಕದ ಎಫ್‌–22 ಹಾಗೂ ಎಫ್‌–35 ಸಮಾನವಾಗಿದೆ. ಆಕಾಶದಲ್ಲಿ ಇದು ಕಮಾಂಡ್‌ ಕೇಂದ್ರದಂತೆ ನಿರ್ವಹಿಸಲಿದೆ’ ಎಂದು ಬೀಜಿಂಗ್‌ ಮೂಲದ ಸೇನಾ ತಜ್ಞ  ಲೀ ಜೈ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.