ADVERTISEMENT

ತಾಯಿ, ಮಗನ ಹತ್ಯೆ: ಮಾಹಿತಿ ನೀಡಿದರೆ ಬಹುಮಾನ

ಪಿಟಿಐ
Published 4 ಫೆಬ್ರುವರಿ 2018, 19:26 IST
Last Updated 4 ಫೆಬ್ರುವರಿ 2018, 19:26 IST

ವಾಷಿಂಗ್ಟನ್: ಭಾರತ ಸಂಜಾತ ಮಹಿಳೆ ಮಾಲಾ ಮನ್ವಾನಿ (65) ಹಾಗೂ ಅವರ ಮಗ ರಿಷಿ ಮನ್ವಾನಿ (32) ಅವರ ಹತ್ಯೆ ಸಂಬಂಧ ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಅಮೆರಿಕದ ಪೊಲೀಸರು ಘೋಷಣೆ ಮಾಡಿದ್ದಾರೆ.

ವಾಷಿಂಗ್ಟನ್‌ ಡಿ.ಸಿ. ಉಪನಗರದ ಮನೆಯಲ್ಲಿ ಇವರಿಬ್ಬರನ್ನೂ ಇತ್ತೀಚೆಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ‘ಅವಳಿ ಹತ್ಯೆಗಳ ಬಗ್ಗೆ ಯಾರಾದರೂ ಮಾಹಿತಿ ಹೊಂದಿದ್ದು, ಅಂತಹವರು ತಮ್ಮ ಹೆಸರನ್ನು ಗೋಪ್ಯವಾಗಿ ಇಡಲು ಬಯಸಿದರೆ ಹಾಗೇ ಮಾಡಲಾಗುವುದು’ ಎಂದು ಪೊಲೀಸರು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT