ADVERTISEMENT

ಶತಮಾನದ ದಾಖಲೆಯ ಭಾಷಣ

ಡೆಮಾಕ್ರಟಿಕ್‌ ನಾಯಕಿ ನ್ಯಾನ್ಸಿ ಪೆಲೊಸಿ ಅವರಿಂದ 8ಗಂಟೆಗೂ ಹೆಚ್ಚು ಭಾಷಣ

ಏಜೆನ್ಸೀಸ್
Published 8 ಫೆಬ್ರುವರಿ 2018, 20:16 IST
Last Updated 8 ಫೆಬ್ರುವರಿ 2018, 20:16 IST
ಶತಮಾನದ ದಾಖಲೆಯ ಭಾಷಣ
ಶತಮಾನದ ದಾಖಲೆಯ ಭಾಷಣ   

ವಾಷಿಂಗ್ಟನ್: ಸತತ ಎಂಟು ಗಂಟೆಗಳಿಗೂ ಹೆಚ್ಚು ಕಾಲ ಸುದೀರ್ಘ ಭಾಷಣ ಮಾಡುವ ಮೂಲಕ ಅಮೆರಿಕದ ಡೆಮಾಕ್ರಟಿಕ್‌ ಪಕ್ಷದ ನಾಯಕಿ ನ್ಯಾನ್ಸಿ ಪೆಲೊಸಿ ಅವರು ಇತಿಹಾಸ ಸೃಷ್ಟಿಸಿದ್ದಾರೆ.

ಕಳೆದ 108 ವರ್ಷಗಳಲ್ಲೇ ಇದು ದಾಖಲೆಯ ಭಾಷಣವಾಗಿದೆ. ದಾಖಲೆಗಳಿಲ್ಲದ ಯುವ ವಲಸೆಗಾರರ ರಕ್ಷಣೆ ಕುರಿತು ಜನಪ್ರತಿನಿಧಿಗಳ ಸಭೆಯಲ್ಲಿ ಪೆಲೊಸಿ ಅವರು ಭಾಷಣ ಮಾಡಿದ್ದಾರೆ. ಹಲವು ವರ್ಷಗಳಿಂದ ಬಿಕ್ಕಟ್ಟು ಸೃಷ್ಟಿಸಿರುವ ವಲಸೆ ಸಮಸ್ಯೆಗೆ ಪರಿಹಾರ ದೊರೆಯಬೇಕಾಗಿದೆ ಎಂದು ಪೆಲೋಸಿ ಹೇಳಿದ್ದಾರೆ.

77 ವರ್ಷದ ನ್ಯಾನ್ಸಿ ಅವರು ಭಾಷಣದ ಸಂದರ್ಭದಲ್ಲಿ ನೀರನ್ನು ಹೊರತುಪಡಿಸಿದರೆ ಯಾವುದೇ ರೀತಿಯ ಆಹಾರ ಸೇವಿಸಲಿಲ್ಲ. ಒಟ್ಟು 8 ಗಂಟೆ ಏಳು ನಿಮಿಷಗಳ ಕಾಲ ಭಾಷಣ ಮಾಡಿದರು.

ADVERTISEMENT

**

5 ಗಂಟೆಗಳ ಭಾಷಣ

ಸಂಸದರಾಗಿದ್ದ ಚಾಂಪ್‌ ಕ್ಲರ್ಕ್‌ ಅವರು 1909ರಲ್ಲಿ 5ಗಂಟೆ 15 ನಿಮಿಷಗಳ ಭಾಷಣ ಮಾಡಿ ದಾಖಲೆ ಸ್ಥಾಪಿಸಿದ್ದರು. 1909ಕ್ಕೂ ಮುನ್ನ ಸುದೀರ್ಘ ಭಾಷಣ ಮಾಡಿದ ಬಗ್ಗೆ ಮಾಹಿತಿ ಇಲ್ಲ.

*

ಎಂಟು ಗಂಟೆಗಳ ಭಾಷಣ ಮಾಡಿ ದಾಖಲೆ ಸೃಷ್ಟಿಸಿದ್ದೀರಿ ಎಂದು ಹೇಳಿದಾಗ ನನಗೆ ಆಶ್ಚರ್ಯವಾಯಿತು.
–ನ್ಯಾನ್ಸಿ ಪೆಲೊಸಿ, ಡೆಮಾಕ್ರಟಿಕ್‌ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.