ADVERTISEMENT

ಭೂಮಿಗೆ ಸಮೀಪಿಸಲಿದೆ ಕ್ಷುದ್ರಗ್ರಹ

ಪಿಟಿಐ
Published 8 ಫೆಬ್ರುವರಿ 2018, 20:18 IST
Last Updated 8 ಫೆಬ್ರುವರಿ 2018, 20:18 IST
ಭೂಮಿಗೆ ಸಮೀಪಿಸಲಿದೆ ಕ್ಷುದ್ರಗ್ರಹ
ಭೂಮಿಗೆ ಸಮೀಪಿಸಲಿದೆ ಕ್ಷುದ್ರಗ್ರಹ   

ವಾಷಿಂಗ್ಟನ್‌: ಇದೇ 10ರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸಣ್ಣ ಗಾತ್ರದ ಕ್ಷುದ್ರಗ್ರಹವೊಂದು ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ತಿಳಿಸಿದೆ.

‘2018 ಸಿಬಿ’ ಎಂದು ಹೆಸರಿಸಲಾಗಿರುವ, 15ರಿಂದ 30 ಮೀಟರ್‌ಗಳಷ್ಟು ಗಾತ್ರದ ಕ್ಷುದ್ರಗ್ರಹ ಭೂಮಿಯಿಂದ 64 ಸಾವಿರ ಕಿ.ಮೀ ದೂರದಲ್ಲಿ ಹಾದು ಹೋಗಲಿದೆ.

‘ನಾಸಾ’ದ ಕೆಟಲಿನಾ ಆಕಾಶ ಸಮೀಕ್ಷೆಯು (ಸಿಎಸ್‌ಎಸ್‌) ಫೆಬ್ರುವರಿ 4ರಂದು ಎರಡು ಕ್ಷುದ್ರಗ್ರಹಗಳನ್ನು ಪತ್ತೆ ಹಚ್ಚಿತ್ತು.

ADVERTISEMENT

‘2018ಸಿಸಿ’ ಎಂಬ ಕ್ಷುದ್ರಗ್ರಹವು ಫೆಬ್ರುವರಿ 6ರಂದು ಭೂಮಿಯಿಂದ 1.84 ಲಕ್ಷ ಕಿಲೊ ಮೀಟರ್‌ ದೂರದಲ್ಲಿ ಹಾದು ಹೋಗಿತ್ತು. ಅದರ ಗಾತ್ರವು 15ರಿಂದ 40 ಮೀಟರ್‌ಗಳ ನಡುವೆ ಇತ್ತು ಎಂದು ಸಿಎಸ್‌ಎಸ್‌ ಹೇಳಿದೆ.

‘ಈ ಗಾತ್ರದ ಕ್ಷುದ್ರಗ್ರಹಗಳು ಭೂಮಿಗೆ ಇಷ್ಟು ಸಮೀಪದಲ್ಲಿ ಹಾದು ಹೋಗುವುದು ತೀರಾ ಅಪರೂಪ. ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಈ ರೀತಿ ಆಗುತ್ತದೆ’ ಎಂದು ‘ನಾಸಾ’ದ ಪಾಲ್ ಕೊಡಾಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.