ADVERTISEMENT

ವೆಚ್ಚ ಮಸೂದೆಗೆ ಅನುಮೋದನೆ

ಏಜೆನ್ಸೀಸ್
Published 9 ಫೆಬ್ರುವರಿ 2018, 19:22 IST
Last Updated 9 ಫೆಬ್ರುವರಿ 2018, 19:22 IST

ವಾಷಿಂಗ್ಟನ್‌: ವೆಚ್ಚ ಮಸೂದೆಗೆ ಅಮೆರಿಕ ಸಂಸತ್‌ ಶುಕ್ರವಾರ ಅನುಮೋದನೆ ನೀಡಿದೆ.

ಇದರಿಂದ ಕಳೆದ ಮೂರು ವಾರಗಳಿಂದ ಸ್ಥಗಿತಗೊಂಡಿದ್ದ ಅಮೆರಿಕದ ಆಡಳಿತಕ್ಕೆ ಮತ್ತೆ ಚಾಲನೆ ದೊರೆಯಲಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಹಿಗಾಗಿ ಮಸೂದೆಯನ್ನು ಕಳುಹಿಸಲಾಗಿದೆ.

ಜನವರಿ 20ರಂದು ಅಲ್ಪಾವಧಿಯ ವೆಚ್ಚಗಳ ಲೇಖಾನುದಾನಕ್ಕೆ ಸೆನೆಟ್‌ನಲ್ಲಿ ಅನುಮೋದನೆ ನೀಡಲು ಡೆಮಾಕ್ರಟಿಕ್‌ ಪಕ್ಷದ ನಾಯಕರು ನಿರಾಕರಿಸಿದ್ದರಿಂದ, ಆಡಳಿತ ಯಂತ್ರ ಸ್ಥಗಿತಗೊಂಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.