ಲಂಡನ್: ಮೂತ್ರ ಉತ್ಪಾದಿಸುವ ಸಾಮರ್ಥ್ಯವಿರುವ ಮಾನವನ ಮೂತ್ರಪಿಂಡದ ಅಂಗಾಂಶವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಮೂತ್ರಪಿಂಡದ ಚಿಕಿತ್ಸೆಯ ವಿಧಾನಗಳ ಅಭಿವೃದ್ಧಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
‘ಮಾನವ ಭ್ರೂಣದ ಜೀವಕೋಶಗಳನ್ನು ಅಭಿವೃದ್ಧಿಪಡಿಸಿ ಅದರಿಂದ ’ಗ್ಲೋಮರುಲೈ‘ ಎಂಬ ಮೂತ್ರಪಿಂಡದ ಸೂಕ್ಷ್ಮ ಗಾತ್ರದ ಭಾಗಗಳನ್ನು ಬೆಳೆಸಿ, ಸಂಶೋಧನೆ ನಡೆಸಲಾಗಿದೆ. ಈ ಭಾಗಗಳನ್ನು ಅಂಟಿನಂತಹ ವಸ್ತುವಿನೊಂದಿಗೆ ಸೇರಿಸಿ ಇಲಿಯ ಚರ್ಮದ ಮೂಲಕ ಅದರ ದೇಹದ ಒಳಗೆ ಸೇರಿಸಲಾಗಿದೆ. ಹೀಗೇ ಮಾಡಿದ 3 ತಿಂಗಳ ನಂತರ ಮೂತ್ರಪಿಂಡದ ಕಾರ್ಯಕಾರಿ ಭಾಗವಾದ ನೆಫ್ರಾನ್‌ಗಳು ರಚನೆಯಾಗಿದ್ದವು’ ಎಂದು ಸಂಶೋಧನಾ ತಂಡದ ಸದಸ್ಯ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಸ್ಯೂ ಕಿಂಬರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.