ಮಾಸ್ಕೋ: ಸರಾಟೋವಾ ಏರ್ಲೈನ್ಗೆ ಸೇರಿದ ಪ್ರಯಾಣಿಕರ ವಿಮಾನವು ಇಲ್ಲಿನ ರಾಮೆನ್ಸ್ಕಿಯ ಹೊರವಲಯದಲ್ಲಿ ಭಾನುವಾರ ಪತನವಾಗಿದ್ದು, 71 ಮಂದಿ ಸಾವಿಗೀಡಾಗಿದ್ದಾರೆ.
ದುರಂತಕ್ಕೀಡಾದ ಅನ್ಟೊನೋವ್ ಆನ್–148 ಹೆಸರಿನ ವಿಮಾನವು ಉರಲ್ಸ್ನ ಒರಸ್ಕ್ ನಗರಕ್ಕೆ ಪ್ರಯಾಣ ಬೆಳೆಸಿತ್ತು. ವಿಮಾನದಲ್ಲಿ 65 ಮಂದಿ ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಇದ್ದರು ಎಂದು ತಿಳಿದು ಬಂದಿದೆ.
ಈ ಅನಾಹುತದ ಬಗ್ಗೆ ಖಚಿತತೆ ನೀಡಿದ ರಷ್ಯಾ ಸಚಿವಾಲಯವು, ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ಹೇಳಿದೆ.
ಈ ದುರಂತದ ನಿಖರ ಕಾರಣ ತಿಳಿದು ಬಂದಿಲ್ಲ. ಹವಾಮಾನ ವೈಪರಿತ್ಯ, ಪೈಲಟ್ನ ನಿರ್ಲಕ್ಷ್ಯತನ.. ಹೀಗೆ ಹಲವು ಕಾರಣಗಳು ಇದ್ದಿರಬಹುದು. ತನಿಖೆಯ ನಂತರವಷ್ಟೇ ತಿಳಿಯಬೇಕಾಗಬೇಕಿದೆ ಎಂದು ರಷ್ಯನ್ ನ್ಯೂಸ್ ಏಜೆನ್ಸಿ ಇಂಟರ್ಫ್ಲೆಕ್ಸ್ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.