ADVERTISEMENT

ತಾಂಜಾನಿಯಾ ಪ್ರವಾಹ: 2 ವಾರಗಳಲ್ಲಿ 58 ಮಂದಿ ಸಾವು

ಏಜೆನ್ಸೀಸ್
Published 15 ಏಪ್ರಿಲ್ 2024, 13:12 IST
Last Updated 15 ಏಪ್ರಿಲ್ 2024, 13:12 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನೈರೋಬಿ (ಕೀನ್ಯಾ): ತಾಂಜಾನಿಯಾದಲ್ಲಿ ಪ್ರವಾಹದಿಂದ ಕಳೆದ ಎರಡು ವಾರಗಳಲ್ಲಿ 58 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. 

ಪೂರ್ವ ಆಫ್ರಿಕಾದ ದೇಶದಲ್ಲಿ ಭಾರಿ ಮಳೆ ಆಗುತ್ತಿದ್ದು, ಕರಾವಳಿ ಪ್ರದೇಶದ ಸುಮಾರು ಒಂದೂಕಾಲು ಲಕ್ಷ ಜನರ ಜೀವನದ ಮೇಲೆ ವ್ಯತರಿಕ್ತ ಪರಿಣಾಮ ಉಂಟಾಗಿದೆ. ಕೀನ್ಯಾದಲ್ಲಿ ಕೂಡ 13 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರದ ವಕ್ತಾರ ಮೊಭಾರೆ ಮಟಿನ್ಯಿ ಭಾನುವಾರ ಪ್ರಕಟಣೆಯಲ್ಲಿ ಹೇಳಿದ್ದಾರೆ. 

ADVERTISEMENT

ಭವಿಷ್ಯದಲ್ಲಿ ನೆರೆ  ಹಾವಳಿಯನ್ನು ತಪ್ಪಿಸಲು ತಾಂಜಾನಿಯಾದಲ್ಲಿ 14 ಅಣೆಕಟ್ಟುಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ತಿಂಗಳ ಅಂತ್ಯದವರೆಗೆ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣವಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.