ADVERTISEMENT

ಫಿಲಿಪ್ಪೀನ್ಸ್‌: ಹಡಗಿನಲ್ಲಿ ಅಗ್ನಿ ಅವಘಡ– 7 ಸಾವು

ಏಜೆನ್ಸೀಸ್
Published 23 ಮೇ 2022, 14:09 IST
Last Updated 23 ಮೇ 2022, 14:09 IST
ಫಿಲಿಪ್ಪೀನ್ಸ್‌ನ ರಿಯಲ್‌ ಬಂದರಿನ ಸಮೀಪ ಹೊತ್ತಿ ಉರಿದ ಹಡಗು   –ಎಎಫ್‌ಪಿ ಚಿತ್ರ
ಫಿಲಿಪ್ಪೀನ್ಸ್‌ನ ರಿಯಲ್‌ ಬಂದರಿನ ಸಮೀಪ ಹೊತ್ತಿ ಉರಿದ ಹಡಗು   –ಎಎಫ್‌ಪಿ ಚಿತ್ರ   

ಮನಿಲಾ (ಎಪಿ): ಫಿಲಿಪ್ಲೀನ್ಸ್‌ನ ರಿಯಲ್‌ ಬಂದರಿನ ಸಮೀಪ ಸೋಮವಾರ ಎಂ.ವಿ. ಮಿರ್‌ಕ್ರಾಫ್ಟ್ 2 ಹಡಗಿನ ಎಂಜಿನ್‌ ಕೊಠಡಿಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ 7 ಜನ ಮೃತಪಟ್ಟಿದ್ದು, 24 ಮಂದಿ ಅಸ್ವಸ್ಥರಾಗಿದ್ದಾರೆ.

ಪೊಲಿಲೊ ದ್ವೀಪದಿಂದ ಕ್ವಿಜಾನ್ ಪ್ರಾಂತ್ಯದ ಪಟ್ಟಣಕ್ಕೆ ತೆರಳುತ್ತಿದ್ದ ಹಡಗಿನಲ್ಲಿ 130ಕ್ಕೂ ಹೆಚ್ಚು ಜನರಿದ್ದರು. ಬೆಂಕಿ ಕಾಣಿಸುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದವರನ್ನು ಬೇರೆ ಹಡಗುಗಳಸಹಾಯದಿಂದ ದಡ ಸೇರಿಸಲಾಗಿದೆ ಎಂದು ರಿಯಲ್‌ ಟೌನ್‌ ಆಡಳಿತಾಧಿಕಾರಿ ಫಿಲೋಮಿನಾ ಪೋರ್ಟೇಲ್ಸ್ ಮಾಹಿತಿ ನೀಡಿದ್ದಾರೆ.

ಫಿಲಿಪ್ಪೀನ್ಸ್‌ನಲ್ಲಿ ಹಡಗು ದುರಂತಗಳು ಸಾಮಾನ್ಯವೆನಿಸಿಬಿಟ್ಟಿವೆ. ಮೇಲಿಂದ ಮೇಲೆ ಎದುರಾಗುತ್ತಿರುವ ಬಿರುಗಾಳಿ, ದೋಣಿ ಮತ್ತು ಹಡಗುಗಳ ನಿರ್ವಹಣೆ ಸಮರ್ಪಕವಾಗಿಲ್ಲದಿರುವುದು, ಮಿತಿಮೀರಿದ ಸಂಖ್ಯೆಯಲ್ಲಿ ಜನರನ್ನು ಕರೆದೊಯ್ಯುವುದು ಹಾಗೂ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸದೆ ಇರುವುದರಿಂದ ಇಂತಹ ದುರಂತಗಳು ಸಂಭವಿಸುತ್ತಿವೆ. 1987ರ ಡಿಸೆಂಬರ್‌ನಲ್ಲಿ ಡೋನಾ ಪಾಝ್‌ ಎಂಬ ಹೆಸರಿನ ಹಡಗೊಂದು ಇಂಧನ ಟ್ಯಾಂಕರ್‌ ಹಡಗಿಗೆ ಡಿಕ್ಕಿ ಹೊಡೆದುದರಿಂದ 4,300 ಮಂದಿ ಮೃತಪಟ್ಟಿದ್ದರು. ಯುದ್ಧ ಹೊರತಾಗಿ ಶಾಂತಿಕಾಲದಲ್ಲಿ ಸಮುದ್ರದಲ್ಲಿ ಸಂಭವಿಸಿದ ಅತ್ಯಂತ ದೊಡ್ಡ ದುರಂತ ಎಂಬ ಕುಖ್ಯಾತಿಗೆ ಈ ಅಪಘಾತ ಪಾತ್ರವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.