ADVERTISEMENT

ಕಡಲ್ಗಳ್ಳರ ಒತ್ತೆಯಲ್ಲಿದ್ದ 18 ಭಾರತೀಯರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 20:37 IST
Last Updated 23 ಡಿಸೆಂಬರ್ 2019, 20:37 IST

ನವದೆಹಲಿ: ನೈಜೀರಿಯಾ ಕರಾವಳಿಯಲ್ಲಿ ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ ಹದಿನೆಂಟು ಮಂದಿ ಭಾರತೀಯರು ಬಿಡುಗಡೆಗೊಂಡಿದ್ದಾರೆ ಎಂದು ನೈಜೀರಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಹಾಂಗ್‌ಕಾಂಗ್‌ನ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರನ್ನು ಡಿಸೆಂಬರ್‌ 3ರಂದು ಬೋನಿ ದ್ವೀಪದ ಬಳಿಯಿಂದ ಕಡಲ್ಗಳ್ಳರು ಅಪಹರಿಸಿದ್ದರು. ಭಾರತೀಯರು ಬಿಡುಗಡೆಗೊಂಡಿರುವುದನ್ನು ನೈಜೀರಿಯಾದ ನೌಕಾಪಡೆ ದೃಢಪಡಿಸಿದೆ. ಅವರಿಗೆ ಧನ್ಯವಾದಗಳು ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್‌ ಮಾಡಿದೆ.18 ಮಂದಿ ಭಾರತೀಯರು ಸೇರಿದಂತೆ 19 ಮಂದಿಯನ್ನು ಕಡಲ್ಗಳ್ಳರು ಅಪಹರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT