ADVERTISEMENT

88ನೇ ಆಸ್ಕರ್‌ ಪ್ರಶಸ್ತಿಗಳ ನಾಮನಿರ್ದೇಶನ ಪ್ರಕಟ

​ಪ್ರಜಾವಾಣಿ ವಾರ್ತೆ
Published 14 ಜನವರಿ 2016, 19:30 IST
Last Updated 14 ಜನವರಿ 2016, 19:30 IST
88ನೇ ಆಸ್ಕರ್‌ ಪ್ರಶಸ್ತಿಗಳ ನಾಮನಿರ್ದೇಶನ ಪ್ರಕಟ
88ನೇ ಆಸ್ಕರ್‌ ಪ್ರಶಸ್ತಿಗಳ ನಾಮನಿರ್ದೇಶನ ಪ್ರಕಟ   

ಲಾಸ್‌ ಏಂಜಲೀಸ್‌ (ಪಿಟಿಐ): ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗಳ ಅತ್ಯುತ್ತಮ ವಿದೇಶಿ  ಭಾಷಾ ಸಿನಿಮಾ ವಿಭಾಗದಲ್ಲಿ ಭರವಸೆ ಮೂಡಿಸಿದ್ದ ಮರಾಠಿ ಚಿತ್ರ ‘ಕೋರ್ಟ್‌’ (ನಿ: ಚೈತನ್ಯ ತಮ್ಹಾನೆ) ನಾಮನಿರ್ದೇಶನಗೊಳ್ಳುವಲ್ಲಿ ವಿಫಲವಾಗಿದೆ.

ಲಿಯೊನಾರ್ಡೊ ಡಿಕ್ಯಾಪ್ರಿಯೊ ನಟನೆಯ ‘ದಿ ರೆವೆನೆಂಟ್‌’ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಿರ್ದೇಶಕ ಸೇರಿದಂತೆ 12 ವಿಭಾಗಗಳಲ್ಲಿ  ನಾಮನಿರ್ದೇಶನಗೊಳ್ಳುವ ಮೂಲಕ ಆಸ್ಕರ್‌ ಪ್ರಶಸ್ತಿಯಲ್ಲಿ ಸಿಂಹಪಾಲನ್ನು ತನ್ನದಾಗಿಸಿಕೊಳ್ಳುವ ನಿರೀಕ್ಷೆ ಮೂಡಿಸಿದೆ.  ಅಲೆಕ್ಸಾಂಡ್ರೊ ಗೊನ್ಸಾರೆಸ್‌ ಇನಾರಿಟು ನಿರ್ದೇಶನದ ಚಿತ್ರವಿದು.

ಹತ್ತು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿರುವ ‘ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌’ (ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ) ಎರಡನೇ  ಸ್ಥಾನದಲ್ಲಿದೆ. ಒಟ್ಟು 24 ವಿಭಾಗಗಳಲ್ಲಿ ನಾಮನಿರ್ದೇಶನ ಪ್ರಕಟಿಸಲಾಗಿದ್ದು, ಫೆಬ್ರುವರಿ 28ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಭರವಸೆ ಮೂಡಿಸಿದ ಸಂಜಯ್‌, ಆಸಿಫ್‌
ಭಾರತ ಮೂಲದ ಅಮೆರಿಕನ್‌ ನಿರ್ದೇಶಕ ಸಂಜಯ್‌ ಪಟೇಲ್‌ ಅವರ ‘ಸಂಜಯ್ಸ್‌ ಸೂಪರ್‌ ಟೀಮ್‌’ (ಅನಿಮೇಟೆಡ್‌ ಕಿರುಚಿತ್ರ) ಮತ್ತು ಗಾಯಕಿ ಅಮಿ ವೈನ್‌ಹೌಸ್‌ ಜೀವನಾಧಾರಿತ, ಭಾರತ ಮೂಲದ ಬ್ರಿಟಿಷ್‌ ನಿರ್ದೇಶಕ ಆಸಿಫ್‌ ಕಪಾಡಿಯಾ ಅವರ ‘ಅಮಿ’ (ಸಾಕ್ಷ್ಯಚಿತ್ರ) ನಾಮನಿರ್ದೇಶನಗೊಂಡಿವೆ.

***
ಈ ಬಾರಿಯೂ ವಿವಾದ?
ಲಾಸ್‌ ಏಂಜಲೀಸ್‌ (ಪಿಟಿಐ):
ನಾಮನಿರ್ದೇಶನದಲ್ಲಿ ಈ ಬಾರಿಯೂ ಕಪ್ಪು ವರ್ಣೀಯರ ಚಿತ್ರಗಳನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬಂದಿದ್ದು  ‘ಆಸ್ಕರ್‌’ ಸುತ್ತ ಮತ್ತೆ ವಿವಾದ ಹೆಣೆದುಕೊಳ್ಳುವಂತೆ ಕಾಣುತ್ತಿದೆ.

ಪ್ರಶಸ್ತಿಯ 20 ವಿಭಾಗಗಳ ನಾಲ್ಕು  ಅತ್ಯುತ್ತಮ ನಟ ಪ್ರಶಸ್ತಿಗಳಿಗೆ ಬಿಳಿ ವರ್ಣೀಯರನ್ನೇ ಆಯ್ಕೆ ಮಾಡಲಾಗಿದೆ. ಇತರ ವಿಭಾಗಗಳಲ್ಲಿಯೂ ಕಪ್ಪು ವರ್ಣೀಯರನ್ನು ಕಡೆಗಣಿಸಲಾಗಿದೆ. ಗುರುವಾರ ರಾತ್ರಿ ನಾಮನಿರ್ದೇಶನಗಳು ಪ್ರಕಟವಾಗುತ್ತಿದ್ದಂತೆ ಭಾರಿ ಆಕ್ಷೇಪ, ಆರೋಪಗಳು ವ್ಯಕ್ತವಾಗಿವೆ.

'ಪ್ರಮುಖ ವಿಭಾಗಗಳು'

ಅತ್ಯುತ್ತಮ ಚಿತ್ರ ವಿಭಾಗ
* ದಿ ಬಿಗ್ ಶಾರ್ಟ್‌
* ಬ್ರಿಡ್ಜ್ ಆಫ್ ಸ್ಪೈಸ್‌
* ಬ್ರೂಕ್ಲಿನ್‌
* ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌
* ದಿ ಮಾರ್ಟಿಯನ್
* ದಿ ರೆವೆನೆಂಟ್‌
* ರೂಮ್‌
* ಸ್ಪಾಟ್‌ಲೈಟ್

ಅತ್ಯುತ್ತಮ ನಿರ್ದೇಶಕ
* ಲೆನ್ನಿ ಅಬ್ರಹಾಮ್ಸನ್‌– ರೂಮ್
* ಅಲೆಕ್ಸಾಂಡ್ರೊ ಜಿ. ಇನಾರಿಟು– ದಿ ರೆನೆವೆಂಟ್‌
* ಟಾಮ್‌ ಮೆಕ್‌ಕಾರ್ಥಿ– ಸ್ಪಾಟ್‌ಲೈಟ್‌
* ಆ್ಯಡಮ್‌ ಮೆಕ್‌ಕೇ– ದಿ ಬಿಗ್‌ ಶಾರ್ಟ್‌
* ಜಾರ್ಜ್‌ ಮಿಲ್ಲರ್‌– ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌

ADVERTISEMENT

ಅತ್ಯುತ್ತಮ ನಟ
* ಬ್ರಿಯಾನ್ ಕ್ರಾನ್‌ಸ್ಟನ್‌– ಟ್ರಂಬೊ
* ಮಾಟ್‌ ಡಮೊನ್– ದಿ ಮಾರ್ಟಿಯನ್‌
* ಲಿಯನಾರ್ಡೊ ಡಿ ಕಾಪ್ರಿಯೊ– ದಿ ರೆನೆವೆಂಟ್‌
* ಮೈಖಲ್‌ ಫಾಸ್‌ಬೆಂಡರ್‌– ಸ್ಟೀವ್ ಜಾಬ್ಸ್‌
* ಎಡ್ಡಿ ರೆಡ್ಮಯ್ನೆ– ದಿ ಡ್ಯಾನಿಶ್‌ ಗರ್ಲ್‌

ಅತ್ಯುತ್ತಮ ನಟಿ
* ಕೇಟ್‌ ಬ್ಲಾಂಚೆಟ್‌– ಕ್ಯಾರೊಲ್‌
* ಬ್ರೀ ಲಾರ್ಸನ್‌– ರೂಮ್‌
* ಜೆನ್ನಿಫರ್ ಲಾರೆನ್ಸ್‌– ಜಾಯ್‌
* ಚಾರ್ಲೆಟ್‌ ರ‍್ಯಾಪ್ಲಿಂಗ್‌– 45 ಇಯರ್ಸ್‌
* ಸಾಯ್‌ರೈಸ್‌ ರೊನಾನ್‌– ಬ್ರೂಕ್ಲಿನ್‌

ಅತ್ಯುತ್ತಮ ವಿದೇಶಿ ಭಾಷಾ ಚಿತ್ರ
* ಎ ವಾರ್‌ (ಡೆನ್ಮಾರ್ಕ್‌)
* ಎಂಬ್ರೇಸ್‌ ಆಫ್‌ ದಿ ಸರ್ಪೆಂಟ್‌ (ಕೊಲಂಬಿಯಾ)
* ಮುಸ್ಟಾಂಗ್‌ (ಫ್ರಾನ್ಸ್‌)
* ಸನ್‌ ಆಫ್‌ ಸೌಲ್ (ಹಂಗೆರಿ)
* ಥೀಬ್‌ (ಜೋರ್ಡನ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.