ADVERTISEMENT

100ನೇ ದಿನಕ್ಕೆ ಸುಡಾನ್ ಸಂಘರ್ಷ: ಪೂರ್ವ ಸುಡಾನ್‌ನಲ್ಲಿ ವಿಮಾನ ಪತನ– 9 ಮಂದಿ ಸಾವು

ಪಿಟಿಐ
Published 24 ಜುಲೈ 2023, 10:07 IST
Last Updated 24 ಜುಲೈ 2023, 10:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೈರೊ: ಪೂರ್ವ ಸುಡಾನ್‌ನಿಂದ ಟೇಕಾಫ್ ಆಗಿದ್ದ ನಾಗರಿಕ ವಿಮಾನವೊಂದು ಪತನಗೊಂಡು ನಾಲ್ವರು ಸೇನಾ ಸಿಬ್ಬಂದಿ ಸೇರಿ 9 ಮಂದಿ ಮೃತಪಟ್ಟಿದ್ದಾರೆ ಎಂದು ಸೇನೆ ತಿಳಿಸಿದೆ.

ಈ ನಡುವೆ, ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾಪಡೆ ನಡುವಿನ ಸಂಘರ್ಷ 100ನೇ ದಿನಕ್ಕೆ ಕಾಲಿಟ್ಟಿದೆ.

ಪೋರ್ಟ್ ಸುಡಾನ್‌ನಲ್ಲಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಮಗುವೊಂದು ಬದುಕುಳಿದಿದೆ ಎಂದು ಸೇನೆ ತಿಳಿಸಿದೆ.

ADVERTISEMENT

ಪೋರ್ಟ್ ಸುಡಾನ್‌ ನಗರದಿಂದ ಟೇಕಾಫ್ ಆದ ಕಲವೇ ಸಮಯದಲ್ಲಿ ಅಂಟೊನೊವ್ ವಿಮಾನವು ಪತನಗೊಂಡಿದೆ ಎಂದು ಮಿಲಿಟರಿ ತಿಳಿಸಿದೆ. ಅಪಘಾತಕ್ಕೆ ತಾಂತ್ರಿಕ ದೋಷ ಕಾರಣ ಎಂದು ತಿಳಿಸಲಾಗಿದೆ.

ರಾಜಧಾನಿ ಖರ್ಟೌಮ್‌ನಲ್ಲಿ ಸೇನೆ ಮತ್ತು ಅರೆಸೇನಾಪಡೆ ನಡುವೆ ಬಹಿರಂಗ ಸಂಘರ್ಷ ಸ್ಫೋಟಗೊಂಡ ಬಳಿಕ ಏಪ್ರಿಲ್ ಮಧ್ಯಭಾಗದಿಂದ ಸುಡಾನ್‌ ಪ್ರಕ್ಷುಬ್ಧಗೊಂಡಿದೆ.

‘ಈ ಸಂಘರ್ಷವು ಭಾನುವಾರ 100ನೇ ದಿನಕ್ಕೆ ಕಾಲಿಟ್ಟಿದೆ. ನೂರಾರು ಜನ ಸಾವಿಗೀಡಾಗಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಾಶವಾಗಿದೆ. ಭವಿಷ್ಯದಲ್ಲಿ ಇನ್ನಷ್ಟು ಆಘಾತ ಕಾದಿದೆ’ಎಂದು ಸುಡಾನ್ ನಿರಾಶ್ರಿತ ಶಿಬಿರದ ನಿರ್ದೇಶಕ ವಿಲಿಯಮ್ ಕಾರ್ಟರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.