ADVERTISEMENT

ಅಫ್ಗಾನಿಸ್ತಾನ ಚುನಾವಣಾ ಹಿಂಸಾಚಾರಕ್ಕೆ ನಾಗರಿಕರು ಬಲಿ–ಯುಎನ್‍ಎಎಂಎ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 18:55 IST
Last Updated 15 ಅಕ್ಟೋಬರ್ 2019, 18:55 IST

ಕಾಬೂಲ್: ಅಫ್ಗಾನಿಸ್ತಾನದಲ್ಲಿ ಈಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯ ವೇಳೆ ನಡೆದ ಹಿಂಸಾಚಾರದಲ್ಲಿ ನೂರಾರು ಮಂದಿ ನಾಗರಿಕರು ಗಾಯಗೊಂಡಿದ್ದು, ಹಲವರು ಮೃತಪಟ್ಟಿದ್ದಾರೆ ಎಂದು ಅಫ್ಗಾನಿಸ್ತಾನದಲ್ಲಿರುವ ವಿಶ್ವಸಂಸ್ಥೆಯ ಸಹಾಯಕ ಘಟಕ(ಯುಎನ್‍ಎಎಂಎ) ಹೇಳಿದೆ.

ಜೂನ್‌ 8ರಿಂದ ಸೆಪ್ಟೆಂಬರ್‌ 30ರೊಳಗಿನ ಅವಧಿಯಲ್ಲಿ ತಾಲಿಬಾನ್‌ ನೇತೃತ್ವದಲ್ಲಿ ವ್ಯಾಪಕ ದಾಳಿಗಳು ನಡೆದಿದ್ದವು.

ಮತದಾನ ದಿನದಂದು ನಡೆದ ಹಿಂಸಾಚಾರಕ್ಕೆ 28 ನಾಗರಿಕರು ಬಲಿಯಾಗಿ, 249 ಮಂದಿ ಗಾಯಗೊಂಡಿದ್ದರು. ಇವರಲ್ಲಿ ಮಕ್ಕಳೂ ಸೇರಿದ್ದಾರೆ ಎಂದು ಯುಎನ್‍ಎಎಂಎ ತಿಳಿಸಿದೆ.

ADVERTISEMENT

’ಮತದಾನ ಕೇಂದ್ರಗಳ ಬಳಿ ತಾಲಿಬಾನ್ ಉಗ್ರರು ರಾಕೆಟ್‌, ಗ್ರೆನೇಡ್‌ ಮತ್ತು ಬಾಂಬ್‌ ದಾಳಿ ನಡೆಸಿದ್ದರು’ ಎಂದೂ ಹೇಳಿದೆ.

ಚುನಾವಣಾ ಪ್ರಚಾರ ಆರಂಭಗೊಂಡ ದಿನದಲ್ಲೇ ಕಾಬೂಲ್‌ನಲ್ಲಿ ಉಗ್ರರು ನಡೆಸಿದ ದಾಳಿಗೆ 21 ಮಂದಿ ಬಲಿಯಾಗಿ, 50 ಮಂದಿ ಗಾಯಗೊಂಡಿದ್ದರು ಎಂದಿದೆ.

ಮತದಾನದ ದಿನ ತಾಲಿಬಾನ್‌ ಉಗ್ರರು ನಡೆಸಿದ ಹಲವು ದಾಳಿ ಯತ್ನಗಳನ್ನು ವಿಫಲಗೊಳಿಸಿದ್ದೇವೆ ಎಂದು ಅಫ್ಗಾನಿಸ್ತಾನದ ಭದ್ರತಾ ಪಡೆಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.