ADVERTISEMENT

ತಾಲಿಬಾನಿ ಉಗ್ರನ ಬಂದೂಕಿಗೆ ಎದೆಯೊಡ್ಡಿದ ದಿಟ್ಟ ಮಹಿಳೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 12:40 IST
Last Updated 8 ಸೆಪ್ಟೆಂಬರ್ 2021, 12:40 IST
ತಾಲಿಬಾನಿ ಉಗ್ರನ ಬಂದೂಕಿಗೆ ಎದೆಯೊಡ್ಡಿದ ಮಹಿಳೆ (ರಾಯಿಟರ್ಸ್‌ ಚಿತ್ರ)
ತಾಲಿಬಾನಿ ಉಗ್ರನ ಬಂದೂಕಿಗೆ ಎದೆಯೊಡ್ಡಿದ ಮಹಿಳೆ (ರಾಯಿಟರ್ಸ್‌ ಚಿತ್ರ)   

ಕಾಬೂಲ್‌: ಅಫ್ಗನ್‌ ಮಹಿಳೆಯೊಬ್ಬರು ತಾಲಿಬಾನಿ ಉಗ್ರನ ಬಂದೂಕಿಗೆ ಎದೆಯೊಡ್ಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಈ ಚಿತ್ರವನ್ನು ರಾಯಿಟರ್ಸ್‌ ಸುದ್ದಿ ಸಂಸ್ಥೆ ಪ್ರಕಟಿಸಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರ ವೈರಲ್‌ ಆಗುತ್ತಿದೆ.

ಮಂಗಳವಾರ ಪಾಕಿಸ್ತಾನದ ರಾಯಭಾರಿ ಕಚೇರಿ ಎದುರು ಅಫ್ಗನ್‌ ಮಹಿಳೆಯರ ಗುಂಪೊಂದು ಪ್ರತಿಭಟನೆ ನಡೆಸುತ್ತಿತ್ತು. ಈ ವೇಳೆ ಮಹಿಳೆಯರನ್ನು ಚದುರಿಸಲು ತಾಲಿಬಾನಿ ಉಗ್ರರ ಗುಂಪು ಸ್ಥಳಕೆ ಬಂದಿದೆ.

ADVERTISEMENT

ತಾಲಿಬಾನಿ ಉಗ್ರನೊಬ್ಬ ಬಂದೂಕಿನ ಬೆದರಿಕೆಯೊಡ್ಡಿದಾಗ ಪ್ರತಿಭಟನನಿರತ ಮಹಿಳೆಯೊಬ್ಬರು ಬಂದೂಕಿನ ನಳಿಕೆಗೆ ಎದೆಯೊಡ್ಡಿದ್ದಾರೆ. ಈ ಚಿತ್ರ ಕುರಿತಂತೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.

ಈ ಚಿತ್ರವನ್ನು ಲಕ್ಷಾಂತರ ಜನರು ಹಂಚಿಕೊಂಡಿದ್ದಾರೆ. ಆ ಮಹಿಳೆಯ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಲಿಬಾನಿ ಉಗ್ರನ ಬಂದೂಕಿಗೆ ಎದೆಯೊಡ್ಡಿದ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.