ADVERTISEMENT

ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದು ಕಡ್ಡಾಯ: ತಾಲಿಬಾನ್‌ ಆದೇಶ

ಏಜೆನ್ಸೀಸ್
Published 7 ಮೇ 2022, 14:45 IST
Last Updated 7 ಮೇ 2022, 14:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಬೂಲ್‌: ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರ ಮಹಿಳೆಯರ ಮೇಲೆ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಇನ್ಮುಂದೆ ಮಹಿಳೆಯರುಸಾರ್ವಜನಿಕ ಸ್ಥಳಗಳಲ್ಲಿ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಬುರ್ಖಾ ಧರಿಸುವುದು ಕಡ್ಡಾಯ ಎಂದುಶನಿವಾರ ಆದೇಶಿಸಿದೆ.

ಅಫ್ಗಾನಿಸ್ತಾನ ಸರ್ವೋಚ್ಚ ನಾಯಕ ಮತ್ತು ತಾಲಿಬಾನ್ ಮುಖ್ಯಸ್ಥ ಹುಬತುಲ್ಲಾ ಅಖುಂದ್‌ಜಾದ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ವಸ್ತ್ರಸಂಹಿತೆ ಜಾರಿ ಮಾಡಿ ಆದೇಶಿಸಿದ್ದಾರೆ. ‘ಮಹಿಳೆಯರು ಇನ್ಮುಂದೆ ಮುಖ ಮತ್ತು ಇಡೀ ದೇಹವನ್ನು ಮುಚ್ಚುವ ನೀಲಿ ಬಣ್ಣದ ಸಾಂಪ್ರದಾಯಿಕ ಆಫ್ಗನ್‌ ಬುರ್ಖಾ ಧರಿಸಬೇಕು’ ಎಂದು ಆಜ್ಞೆ ಮಾಡಿದ್ದಾರೆ.

ಷರಿಯಾ ಕಾನೂನಿನ ಪ್ರಕಾರ ಪುರುಷರನ್ನು ಪ್ರಚೋದಿಸದಿರಲು, ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ಅಥವಾ ಯುವತಿಯರು ಕಣ್ಣನ್ನು ಹೊರತುಪಡಿಸಿ ಮುಖವನ್ನು ಮುಚ್ಚುವ ಬುರ್ಕಾ ಧರಿಸಬೇಕು.ಮಹಿಳೆಯರು ಘನತೆ ಮತ್ತು ಸುರಕ್ಷತೆಯಿಂದ ಬದುಕಬೇಕೆಂಬುದು ನಮ್ಮ ಬಯಕೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.