ADVERTISEMENT

ಪ್ರಾದೇಶಿಕ ಭಯೋತ್ಪಾದನಾ ನಿಗ್ರಹ ಸಹಕಾರಕ್ಕೆ ಚೀನಾ ಮನವಿ

‘ದಿ ರೆಸಿಸ್ಟೆನ್ಸ್‌ ಫ್ರಂಟ್‌’ಅನ್ನು (ಟಿಆರ್‌ಎಫ್‌) ‘ವಿದೇಶಿ ಭಯೋತ್ಪಾದಕ ಸಂಘಟನೆ’ ಎಂದು ಅಮೆರಿಕ ಘೋಷಣೆ

ಪಿಟಿಐ
Published 18 ಜುಲೈ 2025, 16:06 IST
Last Updated 18 ಜುಲೈ 2025, 16:06 IST
ಲಿನ್‌ ಜಿಯಾನ್‌
ಲಿನ್‌ ಜಿಯಾನ್‌   

ಬೀಜಿಂಗ್‌: ‘ಪ್ರಾದೇಶಿಕ ಭದ್ರತೆ ಖಾತರಿಪಡಿಸುವ ನಿಟ್ಟಿನಲ್ಲಿ ಭಯೋತ್ಪಾದನೆ ನಿಗ್ರಹ ಸಹಕಾರವನ್ನು ಹೆಚ್ಚಿಸಬೇಕು’ ಎಂದು ಚೀನಾ ಶುಕ್ರವಾರ ಕರೆ ನೀಡಿದೆ. 

ನಿಷೇಧಿತ ಲಷ್ಕರ್‌ ಎತಯಬಾದ (ಎಲ್‌ಇಟಿ) ಅಧೀನ ಸಂಘಟನೆಯಾಗಿರುವ ‘ದಿ ರೆಸಿಸ್ಟೆನ್ಸ್‌ ಫ್ರಂಟ್‌’ಅನ್ನು (ಟಿಆರ್‌ಎಫ್‌) ‘ವಿದೇಶಿ ಭಯೋತ್ಪಾದಕ ಸಂಘಟನೆ’ ಎಂದು ಅಮೆರಿಕ ಘೋಷಿಸಿದ ಬೆನ್ನಲ್ಲೇ, ಈ ಹೇಳಿಕೆ ಹೊರಬಿದ್ದಿದೆ.

‘ಎಲ್ಲ ಮಾದರಿಯ ಭಯೋತ್ಪಾದನೆಗಳನ್ನು ಚೀನಾ ವಿರೋಧಿಸುತ್ತಿದ್ದು, ಏ.22ರಂದು ಸಂಭವಿಸಿದ ಪಹಲ್ಗಾಮ್‌ ದಾಳಿಯನ್ನು ಕಟುವಾಗಿ ಖಂಡಿಸುತ್ತೇವೆ’ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲಿನ್‌ ಜಿಯಾನ್‌ ತಿಳಿಸಿದ್ದಾರೆ.

ADVERTISEMENT

‘ಪ್ರಾದೇಶಿಕ ಭದ್ರತೆ ಹಾಗೂ ಸುರಕ್ಷತೆ ಖಾತರಿಪಡಿಸಲು ಭಯೋತ್ಪಾದನೆ ನಿಗ್ರಹ ಸಹಕಾರವನ್ನು ಹೆಚ್ಚಿಸಬೇಕು’ ಎಂದು ಈ ವೇಳೆ ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.